
‘ಅನಂತು ವರ್ಸಸ್ ನುಸ್ರುತ್’ ಚಿತ್ರದಲ್ಲಿ ಮನೋಜ್ಣ ಅಭಿನಯ ನೀಡಿದ್ದ ವಿನಯ್ ರಾಜ್ ಕುಮಾರ್ ಈಗ ‘ಪೆಪೆ’ ಎಂಬ ಕನ್ನಡ ಚಿತ್ರದಲ್ಲಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.
ಚಿತ್ರದ ಮಾಸ್ ಪೋಸ್ಟರ್ ಇಂದು ರಿಲೀಸ್ ಆಗಿದ್ದು, ವಿನಯ್ ರಾಜ್ ಕುಮಾರ್ ರಕ್ತ ಸಿಕ್ತ ನೋಟದಿಂದ ಪೋಸ್ಟರ್ ಒಂದು ಕ್ರೈಮ್ ಥ್ರಿಲ್ಲರ್ ಅನುಭವ ನೀಡುವ ಮುನ್ಸೂಚನೆ ನೀಡಿದೆ.
ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಈ ಚಿತ್ರಕ್ಕೆ ಮಂಗಳೂರು ಮೂಲದ ಮುಂಬೈ ಬೆಡಗಿ ಕಾಜಲ್ ಕುಂದರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಕಾಜಲ್ ಕುಂದರ್, ಮಾಯಾ ಕನ್ನಡಿ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಮಾಯಾ ಕನ್ನಡಿ ೨೦೨೦ ರ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ‘ಪೆಪೆ’ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಮತ್ತು ಇನ್ನೂ ಅನೇಕರು ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರವನ್ನು ಉದಯ್ ಶಂಕರ್ ಎಸ್ ಮತ್ತು ನಿಜಗುಣ ಗುರುಸ್ವಾಮಿ ನಿರ್ಮಿಸಿದ್ದಾರೆ.
Tags:
Entertainment