
ಲುಸಿಯಾ ನಿರ್ದೇಶಕ ಪವನ್ ಕುಮಾರ್ ನಿರ್ದೇಶದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿದ್ದು ಈ ಚಿತ್ರವನ್ನು ಹೊಂಬಾಳೆ ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಲಿದೆ. ಈ ವಿಷಯವನ್ನು ಹೊಂಬಾಳೆ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದು, ಪವನ್ ಕುಮಾರ್ ಕೂಡಾ ಇದನ್ನು ಶೇರ್ ಮಾಡಿದ್ದಾರೆ.
ಲುಸಿಯಾ ನಂತರ ಯು ಟರ್ನ್ ನಿರ್ದೇಶನ ಮಾಡಿದ್ದ ಪವನ್, ತೆಲುಗು ವೆಬ್ ಸಿರೀಸ್ ಮತ್ತು ಹಿಂದಿಯಲ್ಲಿ "ಲೈಲಾ" ಎಂಬ ಸಿರೀಸ್ ಗೂ ಜೊತೆಯಾಗಿದ್ದರು.
ಯುವರತ್ನ ಚಿತ್ರ ಯಶಸ್ವಿಯಾಗಿ ತೆರೆಕಾಣುತ್ತಿದ್ದು, ಹೊಂಬಾಳೆ ನಿರ್ಮಾಣದಲ್ಲೇ ಪುನೀತ್ ಇನ್ನೊಮ್ಮೆ ನಟಿಸುತ್ತಿರುವುದು ವಿಶೇಷವಾಗಿದೆ.
ಹೊಂಬಾಳೆ ತಂಡ ಪುನೀತ್ ಚಿತ್ರವನ್ನು ಪವನ್ ನಿರ್ದೇಶನ ಮಾಡಲಿರುವ ಸುದ್ಧಿ ಪ್ರಕಟಿಸಿರುವ ಬೆನ್ನಲ್ಲೇ ಪವನ್ ಕುಮಾರ್ ಕೂಡಾ ಫೇಸ್ಬುಕ್ ಪೋಸ್ಟ್ನಲ್ಲಿ "ಇದು ನಿಜ" ಎಂದು ಪೋಸ್ಟ್ ಮಾಡಿದ್ದಾರೆ.
Tags:
Entertainment