ರಮಾನಾಥ ರೈಗೆ ಮುಖಭಂಗ - ಕಲ್ಲಡ್ಕ ಭಟ್ ವಿರುದ್ಧ ಕೇಸ್ ಗೆ ಕೋರ್ಟ್ ತಡೆ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ಬಂಟ್ವಾಳ, ಆಗಸ್ಟ್ 23: ಹೇಗಾದರೂ ಮಾಡಿ ಕಲ್ಲಡ್ಕ ಭಟ್ಟರನ್ನು ಜೈಲಿಗೆ ಕಳುಹಿಸಿಯೇ ಸಿದ್ಧ ಎಂದು ಬೆಂಡೆತ್ತಿದ್ದ ರಮಾನಾಥ ರೈಗೆ ಕರ್ನಾಟಕದ ಉಚ್ಚ ನ್ಯಾಯಾಲಯ ತೀವ್ರ ಮುಖಭಂಗ ಮಾಡಿದೆ.

ಇದನ್ನೂ ಓದಿ ಃ ಮಹಾನದಿ ಧಾರಾವಾಹಿಯ ನಟಿ ರಚನಾ ಭೀಕರ ಅಪಘಾತಕ್ಕೆ ಬಲಿ - ವಿಡಿಯೋ

ಕಲ್ಲಡ್ಕ ಪ್ರಭಾಕರ್ ಭಟ್ ರ ವಿರುದ್ಧ, ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಲು  ರಾಜ್ಯ ಸರಕಾರ ನೀಡಿದ ಅನುಮತಿಯ ವಿರುದ್ಧ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಮೂರು ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಸ್ಥಳೀಯ ಪೊಲೀಸರಿಂದ ಭಟ್ ವಿರುದ್ಧ ನೋಂದಾಯಿಸಲಾದ ಮತ್ತೊಂದು ಪ್ರಕರಣದಲ್ಲಿ ಈಗ ಮಧ್ಯಂತರ ತಡೆ ನೀಡಿದೆ.


ಇದನ್ನೂ ಓದಿ ಃ ಬ್ಯುಸಿ ಮಾರ್ಕೆಟ್ ನಲ್ಲಿ ಹುಡುಗಿ ಕೈ ಕಡಿದ ಯುವಕ - ಶಾಕಿಂಗ್ ನ್ಯೂಸ್

ಭಟ್ ಪರವಾಗಿ ಸಲ್ಲಿಸಿದ ವಾದಗಳನ್ನು ಕೇಳಿದ ನಂತರ, ಆಗಸ್ಟ್ 22 ರ ಮಂಗಳವಾರ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ಹೈಕೋರ್ಟ್ನ ಏಕ ನ್ಯಾಯಾಧೀಶ ಪೀಠ ಈ ಆದೇಶವನ್ನು ಜಾರಿಗೊಳಿಸಿತು.

ಭಟ್ ವಿರುದ್ಧ ದಾಖಲಿಸಲಾದ ಪ್ರಕರಣಗಳು ಯಾವುದೇ ಮಹತ್ವ ಹೊಂದಿಲ್ಲ ಮತ್ತು ಭಾಷಣಗಳಲ್ಲಿ ಅವರು ಪ್ರಚೋದಕವಾಗಿದ್ದ ಅಥವಾ ಕೋಮುಗುಳಿಗೆಯನ್ನು ಉಂಟುಮಾಡುವ ಯಾವುದೇ ವಿಚಾರ ಪ್ರಸ್ತಾಪವನ್ನು ಮಾಡಲಿಲ್ಲ ಎಂದು ಭಟ್ ಪರ ವಕೀಲ ಅರುಣ್ ಶ್ಯಾಮ್ ವಾದಿಸಿದರು. ಅವರ ವಿರುದ್ಧದ ಪ್ರಕರಣಗಳನ್ನು ನೋಂದಾಯಿಸಲು ಅನುಮತಿ ನೀಡುವ ಮೂಲಕ ಸರ್ಕಾರವು ಕಾನೂನು ವಿರುದ್ಧ ಕ್ರಮ ಕೈಗೊಂಡಿದೆ ಎಂದು ಅವರು ವಾದಿಸಿದರು.

ಇದನ್ನೂ ಓದಿ ಃ "ಗಣೇಶ ಕೇಳಿಸಿಕೊಳ್ಳದೇ ಇರುವಾಗ, ಪ್ರಾರ್ಥಿಸುದರ ಅರ್ಥ ಏನು?" ಅಂದವರಿಗೆ ಮಹಿಳೆಯಿಂದ ಮಂಗಳಾರತಿ

ಬಂಟ್ವಾಳ ಮತ್ತು ವಿಟ್ಟಾಲ್ ನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಟ್,  ಹಿಂದುಗಳು ಮತ್ತು ಮುಸ್ಲಿಮರ ನಡುವೆ ವೈಮನಸ್ಸು ಉಂಟುಮಾಡುವ ಭಾಷಣಗಳನ್ನು ನೀಡಿದ್ದಾರೆ ಎಂದು ಪೊಲೀಸರು ದೂರಿದ್ದರು. ಭಟ್ಟರ ಭಾಷಣದಿಂದ ಆ ಪ್ರದೇಶದ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.

ಇದನ್ನೂ ಓದಿ ಃ ಮೊಹರಂ ದಿನದಂದು  ದುರ್ಗಾ ವಿಗ್ರಹ ವಿಸರ್ಜನೆಗೆ ಅನುಮತಿ ಇಲ್ಲ - ಮಮತಾ ಬ್ಯಾನರ್ಜಿ

ಭಾರತೀಯ ದಂಡ ಸಂಹಿತೆಯ 153 ಎ ಮತ್ತು 505 (2) ರ ಅಡಿಯಲ್ಲಿನ ಅಪರಾಧಗಳಿಗೆ ಸಂಬಂಧಿಸಿದಂತೆ  ಭಟ್ ಅವರನ್ನು ತನಿಖೆ ಮಾಡಲು ಸಂಬಂಧಿಸಿದಂತೆ ಸರ್ಕಾರವು ಅನುಮತಿ ನೀಡಿದೆ. ಈ ಅನುಮತಿಗಳನ್ನು ಸರ್ಕಾರವು ರಾಜಕೀಯ ವೈರತ್ವದಿಂದ ನೀಡಿದೆ ಎಂದು ವಾದಿಸಿ ನ್ಯಾಯಾಲಯದಲ್ಲಿ ಭಟ್ ಪ್ರಶ್ನಿಸಿದ್ದಾರೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: Ramanath Rai faces humiliation as Court stays cases on Prabhakar Bhat Kalladka । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.