
ತುಳುವಿನ ಪಡ್ಡಾಯಿ ಅಂದರೆ ಕನ್ನಡದ ಪಶ್ಚಿಮ ದಿಕ್ಕು ಎಂದರ್ಥ. ತುಳುನಾಡಿನ ಮೊಗವೀರರು ಕಡಲನ್ನು ಪಡ್ಡಾಯಿ ಎಂದೂ ಕರೆಯುವ ಕ್ರಮವಿದೆ.
ಈ ಚಲನಚಿತ್ರದಲ್ಲಿ ಮೋಹನ್ ಶೇಣಿ, ಬಿಂದು ರಕ್ಷಿಧಿ, ಚಂದ್ರಹಾಸ ಉಳ್ಳಾಲ, ಗೋಪಿನಾಥ್ ಭಟ್, ಅವಿನಾಶ್ ರೈ, ಸದಾಶಿವ ನಿನಾಸಂ, ಶ್ರೀನಿಧಿ ಆಚಾರ್, ಪ್ರಭಾಕರ ಕಾಪಿಕಾಡ್, ವಾಣಿ ಪೆರಿಯೋಡಿ, ರವಿ ಭಟ್, ಮಲ್ಲಿಕಾ ಜ್ಯೋತಿಗುಡ್ಡೆ, ಸಂತೋಷ್ ಶೆಟ್ಟಿ ಮತ್ತಿತರು ನಟಿಸಿದ್ದಾರೆ.
ಮುಖಂಡರೊಬ್ಬರ ಮನೆಯಲ್ಲಿನ ಕೆಲಸದಾಳು ದನಿಯ, ತನ್ನ ಪತ್ನಿಯ ಮೂಲಕ ಹೇಗೆ ಬದಲಾಗುತ್ತಾನೆ ಮತ್ತು ಸಮಾಜ ಈ ಬೆಳವಣಿಗೆಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುದೇ ಕಥಾ ಹಂದರ. "ಅತಿ ಆಸೆ ಗತಿ ಕೇಡು" ಎಂಬ ನೀತಿ ಇದರಲ್ಲಿದೆ. ಷೇಕ್ಸ್ ಪಿಯರ್ ನ ಮ್ಯಾಕ್ ಬೆತ್ ನಾಟಕದ ಸ್ಪೂರ್ತಿಯಿಂದಾಗಿ ಮಾಡಿದ ಕರಾವಳಿಯ ಮೊಗವೀರರ ಬದುಕನ್ನು ತೋರಿಸುವ ಚಿತ್ರ ಇದಾಗಿದೆ.