ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಮಧ್ಯೆ ಜಿದ್ದಾಜಿದ್ದಿನ ಹೋರಾಟ ನಡೆದಿದ್ದು, ಭಾರತದಲ್ಲೇ ಇಂತಹ ಪೈಪೋಟಿ ಬೇರೆ ಎಲ್ಲೂ ಇಲ್ಲ ಎನ್ನಲಾಗಿದೆ.
ಬೆಳಿಗ್ಗಿ ಮತ ಎಣಿಕೆ ಶುರುವಾಗಿ ಸ್ವಲ್ಪ ಸಮಯದಲ್ಲೇ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದರೆ, ಸ್ವಲ್ಪ ಸಮಯದ ನಂತರ ಸುಮಲತಾ ಮುನ್ನಡೆ ಸಾಧಿಸಿದ್ದಾರೆ. ಕೊನೆಗೆ ಜಯಮಾಲೆ ಯಾರ ಮಡಿಲಿಗೆ ಸೇರಲಿದೆ ಎನ್ನವುದು ಇನ್ನೂ ಕುತೂಹಲ ಉಂಟು ಮಾಡಿದೆ.
ಇವೆಲ್ಲದರ ಮಧ್ಯೆ, ನಿಖಿಲ್ ಮತ್ತು ಸುಮಲತಾ ನಡುವೆ ಸ್ಪರ್ದೆ ಸಮಬಲವಾದರೆ ಎನಾಗಲಿದೆ ಎಂಬ ಕುತೂಹಲ ನೇರನ್ಯೂಸ್ ಓದುಗರು ಕೇಳಿದ್ದಾರೆ. ಹೌದು, ಬೇರೆಕಡೆ ಎಲ್ಲಾ ಈಗಾಗಲೇ ಯಾರು ಜಯಗಳಿಸಬಹುದು ಎಂದು ಒಂದು ಅಂದಾಜು ಸಿಕ್ಕಿದರೆ, ಮಂಡ್ಯ ಮಾತ್ರ ಇನ್ನೂ ಗುಟ್ಟು ರಟ್ಟುಮಾಡಿಲ್ಲ. ಒಂದು ವೇಳೆ ಟೈ ಆದರೆ ಎನಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಯಾವುದಕ್ಕೂ ಮೂರು ಗಂಟೆಯ ಹೊತ್ತಿಗೆ ಫಲಿತಾಂಶ ಹೊರಬೀಳಲಿದ್ದು, ಅಲ್ಲಿಯವರೆಗೂ ಕಾಯುವ ಅನಿವಾರ್ಯತೆ ಎಲ್ಲರಿಗೂ ಇದೆ.
ಮಂಡ್ಯದಲ್ಲಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾದಗಿನಿಂದ ಜೆಡಿಸ್ ನಲ್ಲಿ ತಳಮಳ ಉಂಟಾಗಿದ್ದು, ಅದೇ ಸಮಯಕ್ಕೆ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಸುಮಲತಾರಿಗೆ ಬೆಜೆಪಿ ಬಹಿರಂಗವಾಗಿ ಬೆಂಬಲ ನೀಡಿದ್ದು, ರಾಕಿಂಗ್ ಸ್ಟಾರ್ ಯಶ್ ಮತ್ತು ದರ್ಶನ್ ಸುಮಲತಾ ಪರವಾಗಿ ಮತಯಾಚನೆಮಾಡಿದ್ದರು.
ಸ
Tags:
Karnataka