ಹೊಸದಿಲ್ಲಿ: ಹಿಂದಿ ನಟಿ ಅನುಷ್ಕಾ ಶರ್ಮಾ ಹೊಸ ಚಿತ್ರ 'ಪರಿ' ಯನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. ಇದು "ಬ್ಲಾಕ್ ಮ್ಯಾಜಿಕ್" ಅನ್ನು ಉತ್ತೇಜಿಸುತ್ತದೆ, ಅಲ್ಲದೆ ಕೆಲವು ಇಸ್ಲಾಮಿಕ್ ಮೌಲ್ಯಗಳನ್ನು ಅವಹೇಳನ ಮಾಡುತ್ತದೆ ಮತ್ತು ಮುಸ್ಲಿಂ ವಿರೋಧಿ ಭಾವನೆಗಳನ್ನು ಹೊಂದಿದೆ " ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಪಾಕಿಸ್ತಾನದ ಸೆನ್ಸಾರ್ ಬೋರ್ಡ್ 'ಪರಿ' ಚಿತ್ರವೂ ಕುರಾನಿನ ಶ್ಲೋಕಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಿವೆ ಎಂದು ಆರೋಪಿಸಿದೆ. ಇದು ಚಿತ್ರವನ್ನು ಬ್ಯಾನ್ ಮಾಡಲು ಇನ್ನೊಂದು ಕಾರಣವಾಗಿದೆ.
"ಚಿತ್ರದಲ್ಲಿ ಬ್ಲಾಕ್ ಮ್ಯಾಜಿಕ್ ಮಾಡಲು ಖುರಾನಿಕ್ ಶ್ಲೋಕಗಳನ್ನು ಹಿಂದೂ ಶ್ಲೋಕಗಳ ಜೊತೆ ಬಳಸಿಕೊಂಡು ತೋರಿಸಲಾಗಿದೆ ಹಾಗು ಮುಸಲ್ಮಾನರನ್ನು ಕೆಟ್ಟವರೆಂದು ಬಿಂಬಿಸಲಾಗಿದೆ ಎಂದು ಕಾರಣ ನೀಡಲಾಗಿದೆ.
ಅಷ್ಟೇ ಅಲ್ಲದೆ ಚಿತ್ರದಲ್ಲಿ ಬ್ಲಾಕ್ ಮ್ಯಾಜಿಕ್ ಅನ್ನು ತೋರಿಸಿದ್ದು ಇದು ಇಸ್ಲಾಮ್ ಗೆ ವಿರುದ್ಧವಾಗಿದೆ ಎನ್ನಲಾಗಿದೆ.
ಪಾಕಿಸ್ತಾನ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಶನ್ನ ಅಧ್ಯಕ್ಷ ಚೌದ್ರಿ ಇಜಾಜ್ ಕಾಮ್ರಾ ಅವರು ದೇಶದ ಸೆನ್ಸಾರ್ ಮಂಡಳಿಯ ನಿರ್ಧಾರಕ್ಕೆ ಒಪ್ಪಿಕೊಂಡಿದ್ದಾರೆ. "ನಮ್ಮ ಸಂಸ್ಕೃತಿ ಮತ್ತು ಇಸ್ಲಾಮಿಕ್ ಇತಿಹಾಸದ ವಿರುದ್ಧವಾಗಿರುವ ಯಾವುದೇ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಬೇಕು" ಎಂದು ಅವರು ಹೇಳಿದರು.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಪಾಕಿಸ್ತಾನದ ಸೆನ್ಸಾರ್ ಬೋರ್ಡ್ 'ಪರಿ' ಚಿತ್ರವೂ ಕುರಾನಿನ ಶ್ಲೋಕಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಿವೆ ಎಂದು ಆರೋಪಿಸಿದೆ. ಇದು ಚಿತ್ರವನ್ನು ಬ್ಯಾನ್ ಮಾಡಲು ಇನ್ನೊಂದು ಕಾರಣವಾಗಿದೆ.