
ಮುಂಬೈಯ ಲೋಖಂಡ್ವಾಲಾದ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಬುಧವಾರ ಬೆಳಿಗ್ಗೆ ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿಗೆ ಯವರ ಶೋಕ ಸಭೆಯಲ್ಲಿ ಬಾಲಿವುಡ್ -ನ ನಟ ನಟಿಯರು ಪಾಲ್ಗೊಂಡು ತಮ್ಮ ಪ್ರೀತಿಯ ನಟಿಗೆ ಅಂತಿಮ ಗೌರವವನ್ನು ಸಲ್ಲಿಸಿದರು.
ಆದರೆ ಖ್ಯಾತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಮಾತ್ರ ಶ್ರೀದೇವಿ ಯವರ ಶೋಕ ಸಭೆಯಲ್ಲಿ ನಗುತ್ತಿರುವಾಗ ಕ್ಲಿಕ್ಕಿಸಿಕೊಂಡು ತೀವ್ರ ಪೇಚಿಗೆ ಒಳಗಾಗಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದ್ದು, ಟ್ವಿಟ್ಟಿಗರು ನಟಿಯನ್ನು ಹಿಗ್ಗಾ ಮುಗ್ಗ ಝಾಡಿಸುತ್ತಿದ್ದರೆ.
ಒಬ್ಬ ಟ್ವಿಟ್ಟರ್ ನಲ್ಲಿ ತನ್ನ ಕೋಪವನ್ನು ತೋರಿಸಿದ್ದು, "ನಿಮಗೆ ಮೃತ ಪಟ್ಟ ಶ್ರೇದೇವಿಯವರ ಆತ್ಮಕ್ಕೆ ಗೌರವ ಸಲ್ಲಿಸಲು ಆಗದಿದ್ದರೆ, ಇಂತಹ ಸಭೆಗಳಿಗೆ ಹೋಗಲೇಬೇಡಿ, ತಮ್ಮ ಸ್ವಂತ ಪ್ರಚಾರಕ್ಕೆ ಬೇರೆಯವರ ಶೋಕ ಸಭೆಯನ್ನು ಉಪಯೋಗಿಸಬೇಡಿ ಎಂದು ಕಿಡಿ ಕಾರಿದ್ದಾರೆ. "If you don't have respect for departed soul then avoid going for last rites just for the sake of media coverage. There was nothing to smile. (sic)"
Tags:
Entertainment