ಚಂದದ ಮಹಿಳೆಯರನ್ನು ಸಪ್ಲೈ ಮಾಡುತ್ತೇವೆಂದು ಮೋಸ ಮಾಡಿದ ಯುವಕರ ಬಂಧನ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ಮಂಗಳೂರು: ಅನಿವಾಸಿ ಭಾರತಿಯರಿಗೆ ಮಹಿಳೆಯರನ್ನು ಸಪ್ಲೈ ಮಾಡುತ್ತೇವೆ ಎಂದು ಅವರನ್ನು ಮೋಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಆ ಯುವಕರನ್ನು ಕೀರ್ತನ್  ಮತ್ತು ಕುಲ್ದೀಪ್ ಎಂದು ಗುರುತಿಸಲಾಗಿದೆ.

ವಿದೇಶದಲ್ಲಿರುವ ಭಾರತೀಯರ ಆಸೆಗಳನ್ನು ತೃಪ್ತಿಪಡಿಸಲು ಭಾರತೀಯ ಮಹಿಳೆಯನ್ನು ಒದಗಿಸುವ ಪ್ರಚೋದನಕಾರಿ ಸಂದೇಶಗಳನ್ನು ವಿದೇಶಿ ಪ್ರಜೆಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಿ ಅವರನ್ನು ಖೆಡ್ಡಾಗೆ ಬೀಳಿಸಲಾಗುತ್ತಿತ್ತು.  ತಮ್ಮ ಗುಂಪಿಗಾಗಿ ಕೆಲಸ ಮಾಡುವ ಮಹಿಳೆಯ ಛಾಯಾಚಿತ್ರಗಳನ್ನು ಕೂಡಾ ಅವರು ಬಳಸುತ್ತಿದ್ದರು. ಅಂತಹ ಸಂದೇಶಗಳು ಯುಎಇ, ಯುಎಇ ಮುಂತಾದ ವಿವಿಧ ದೇಶಗಳ ನಾಗರಿಕರಿಗೆ ಕಳುಹಿಸಲಾಗಿದೆ. ಇದನ್ನು ಸ್ವೀಕರಿಸಿದ ಯುವಕರು, ಮಹಿಳೆಯರ ಫೋಟೋ ನೋಡಿ ಮರುಳಾಗಿ, ಹಣ ಕಳುಹಿಸಿಸುತ್ತಿದ್ದರು ಎನ್ನಲಾಗಿದೆ.

ತಂಡದಲ್ಲಿ ಒಟ್ಟು ೫ ಮಂದಿ ಕಾರ್ಯನಿರ್ವಹಿಸುತ್ತಿದ್ದು, ಉಳಿದವರ ಶೋಧಕಾರ್ಯ ಮುಂದುವರಿದಿದೆ.