ಉತ್ತರ ಕೊರಿಯಾ ಮೇಲೆ ಧಾಳಿ ಮಾಡಲು "ಲಾಕ್ ಆಂಡ್ ಲೋಡ್" ಆಗಿ ರೆಡಿ - ಟ್ರಂಪ್ ವಾರ್ನಿಂಗ್

ಉತ್ತರ ಕೊರಿಯಾಕ್ಕೆ ವಿರುದ್ಧವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು "ಲಾಕ್ ಮತ್ತು ಲೋಡ್ ಮಾಡಿ ರೆಡಿಯಾಗಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಎಚ್ಚರಿಕೆ ನೀಡಿದರು. "ದೇಶದ ಸರ್ವಾಧಿಕಾರಿ ಕಿಮ್ ಜೊಂಗ್ ಅನ್ ಅವರು ಎರಡು ದೇಶಗಳು ಹಾನಿಯನ್ನುಂಟು ಮಾಡುವ ಘರ್ಷಣೆಯ ಮಾರ್ಗವನ್ನು ತಪ್ಪಿಸುವರು." ಎಂದು ಅಶಾದಾಯಕವಾಗಿದ್ದೇವೆ ಎಂದು ಟ್ರಂಪ್ ಹೇಳಿದರು.
"ಮಿಲಿಟರಿ ಈಗ ಸಂಪೂರ್ಣ ಯುದ್ದಸನ್ನದವಾಗಿದೆ, ಲಾಕ್ ಮತ್ತು ಲೋಡ್ ಮಾಡಲ್ಪಟ್ಟಿವೆ, ಉತ್ತರ ಕೊರಿಯಾ ಸಭ್ಯತೆಯಿಂದ ವರ್ತಿಸಬೇಕು ಇಲ್ಲವೇ ಯುದ್ದಕ್ಕೆ ರೆಡಿಯಾಗಬೇಕು, ಆಶಾದಾಯಕವಾಗಿ ಕಿಮ್ ಜೊಂಗ್ ಅನ್ ಶಾಂತಿಯ ಮಾರ್ಗವನ್ನು ಕಂಡುಕೊಳ್ಳುವರು!" ಎಂದು ಟ್ರಂಪ್ ಬೆಳಿಗ್ಗೆ ಟ್ವೀಟ್ ಮಾಡಿದರು.
ಇದಕ್ಕಿಂತ ಮುಂಚೆ, ಉತ್ತರ ಕೊರಿಯಾ, ಗುವಾಮ್ ನ ಸುತ್ತ ಮುತ್ತ ಅಣುಬಾಂಬ್ ಮೂಲಕ ಧಾಳಿಮಾಡುವ ಎಚ್ಚರಿಕೆ ನೀಡಿತ್ತು. ಅದಕ್ಕೆ ಉತರವಾಗಿ, "ಅವರು ಗುವಾಮ್ನಲ್ಲಿ ಏನನ್ನಾದರೂ ಮಾಡಿದರೆ, ಉತ್ತರ ಕೊರಿಯಾದಲ್ಲಿ ಹಿದೆಂದೂ ಕಂಡರಿಯದ ರೀತಿಯಲ್ಲಿ ಧಾಳಿ ಮಾಡುವೆವು" ಎಂದು ಟ್ರಂಪ್ ಅವರು ಪ್ರತ್ಯೇಕ ಟ್ವಿಟ್ ನಲ್ಲಿ ಗುಡುಗಿದ್ದಾರೆ.
"ಆತ ನಮ್ಮ ದೇಶದ ಬಗ್ಗೆ ತುಂಬಾ ಕೀಳಾಗಿ ಮಾತಡಿದ್ದಾನೆ, ಆತನ ಆಟ ನನ್ನ ಬಳಿ ನಡೆಯೊಲ್ಲ" ಎಂದು ಟ್ರಂಪ್ ಕಿಡಿಕಾರಿದ್ದಾರೆ.
Tags: Trump, Ready To war, North Korea, Warning, Twitter War, Nuclear
ಕಾಮೆಂಟ್ಗಳಿಲ್ಲ