
ಚೆನ್ನೈ: ತಮಿಳುನಾಡಿನಲ್ಲಿರುವ ಹೋಲ್ ಸೇಲ್ ಮದ್ಯದ ಅಂಗಡಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವಂತೆ ನಟ-ರಾಜಕಾರಣಿ ಕಮಲ್ ಹಾಸನ್ ಕರೆ ನೀಡಿದ್ದಾರೆ. "ನಮಗೆ ಹಲವಾರು ಹೋಲ್ ಸೇಲ್ ಮಳಿಗೆಗಳು ಅಗತ್ಯವಿಲ್ಲ. ಪೋಸ್ಟ್ ಆಫೀಸ್ಗಿಂತ ಹೋಲ್ ಸೇಲ್ ಔಟ್ಲೆಟ್ ಅನ್ನು ಪತ್ತೆ ಮಾಡುವುದು ಸುಲಭವಾಗಿದೆ. ಇದು ಬದಲಿಸಬೇಕಿದೆ "ಎಂದು ತಮಿಳು ನಿಯತಕಾಲಿಕದ ತನ್ನ ಅಂಕಣದಲ್ಲಿ ಕಮಲ್ ಬರೆದಿದ್ದಾರೆ.
ನಾನು ಮದ್ಯ ನಿಷೇಧದ ಪರವಾಗಿಲ್ಲ ಎಂದು ಕಮಲ್ ಬರೆದಿದ್ದಾರೆ. "ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಆಲ್ಕೊಹಾಲ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗುತ್ತದೆ ಎಂದು ನಾನು ಅನುಮಾನಿಸುತ್ತಿದ್ದೇನೆ. ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಮದ್ಯಪಾನ ನಿಷೇಧ ಮಾಡಲು ಸಾಧ್ಯವಿಲ್ಲ ಎಂದು ನನ್ನ ನಂಬಿಕೆ. ಅಂತಹ ಒಂದು ಕೆಲಸ ಮಾಡಿದರೆ, ಅರಾಜಕತೆ ಉಂಟಾಗಿ ಈ ನಾಗರಿಕರು ಕೊಲೆಗೆ ಗುರಿಯಾಗುತ್ತಾರೆ ಮತ್ತು ಹಾನಿಗೊಳಗಾಗುತ್ತಾರೆ" ಎಂದಿದ್ದಾರೆ.
ತಮಿಳುನಾಡಿನಲ್ಲಿನ ಆಡಳಿತಾತ್ಮಕ ಪಕ್ಷಗಳು ತಮ್ಮ ಸ್ವಂತ ಮದ್ಯದ ಅಂಗಡಿಗಳನ್ನು ತೆರೆದಿವೆ ಎಂದು ಕಮಲ್ ಹೇಳಿದರು. "ಮೊದಲ ಅವರು ನಿಷೇಧದ ಬಗ್ಗೆ ಮಾತನಾಡುತ್ತಾರೆ. ನಂತರ ಅವರೇ ಆಲ್ಕೊಹಾಲ್ ಮಾರಾಟಕ್ಕೆ ಒಲವು ತೋರುತ್ತಾರೆ. ರಾಜಕಾರಣಿಗಳು ಶಾಲೆಗಳಿಗೆ ಹತ್ತಿರ ಅಂಗಡಿಗಳನ್ನು ಸ್ಥಾಪಿಸುವಂತೆ ಒತ್ತಾಯಿಸುತ್ತಿದ್ದಾರೆ ಇದು ನನಗೆ ಚಿಂತೆಗೀಡಾಗುವಂತೆ ಮಾಡಿದೆ. ಆಡಳಿತಾರೂಢ ರಾಜಕಾರಣಿಗಳು ತಮ್ಮ ಉತ್ಪನ್ನವನ್ನು ಮಾರಲು ಒಂದು ಮಳಿಗೆಯನ್ನು ಹುಡುಕುತ್ತಿದ್ದಾರೆ. ಮದ್ಯ ವಿಷೇಧದ ಬಗ್ಗೆ ಮಾತಾಡಿ ಮಹಿಳೆಯರು ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.