
ವೈರಲ್ "ಬ್ಲೂ ವೇಲ್ ಚಾಲೆಂಜ್" ಅನ್ನು ಆಧರಿಸಿರುವ "ಮಾಯಾ ಕನ್ನಡಿ" ಚಿತ್ರವು ಈ ಚಿತ್ರವು ಫೆಬ್ರವರಿ 28, 2020 ರಂದು ಬಿಡುಗಡೆಯಾಗಿತ್ತು. ವಿನೋದ್ ಪೂಜಾರಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಭು ಮುಂಡ್ಕೂರು, ಕೆ.ಎಸ್ ಶ್ರೀಧರ್, ಗಟ್ಟಿಮೇಳ ಖ್ಯಾತಿಯ ಆದ್ಯ ಅನ್ವಿತ ಸಾಗರ್, ಕಾಜಲ್ ಕುಂದರ್, ಅನೂಪ್ ಸಾಗರ್ ಪ್ರಮುಖ ಪಾತ್ರದಲ್ಲಿದ್ದಾರೆ.
ಚಿತ್ರ ರಿಲೀಸ್ ಆದ ಸ್ವಲ್ಪ ಸಮಯದಲ್ಲೇ ಲಾಕ್ ಡೌನ್ ಹೊಡೆತದಿಂದ ನಲುಗಿದ್ದ ಚಿತ್ರಕ್ಕೆ ಈಗ ಒ.ಟಿ.ಟಿ ಆಸರೆಯಾಗಿದೆ. ಎಮ್ ಎ಼ಕ್ಸ್ ಪ್ಲೇಯರ್ ಒ.ಟಿ.ಟಿ ಮೂಲಕ ಈ ಚಿತ್ರವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.