
ಮಂಗಳೂರಿನ ಪದವಿನಂಗಡಿ ಬಳಿ, ಬೈಕ್ ಸವಾರನೊಬ್ಬ, ರಸ್ತೆ ದಾಟುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋಗಿ, ರಸ್ತೆ ಬದಿಯ ಅಂಗಡಿಯ ಎದುರು ಇದ್ದ ಸಾಮಾಗ್ರಿಗಳಿಗೆ ಡಿಕ್ಕಿ ಹೊಡೆದು, ಬಿದ್ದಿರುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೇ 7 ರ ಶುಕ್ರವಾರ ಅಪಘಾತ ಸಂಭವಿಸಿದೆ. ಪದವಿನಂಗಡಿ ಜಂಕ್ಷನ್ ಕಡೆಗೆ ಬರುತ್ತಿದ್ದ ಶಾರ್ಭಟ್ಕತ್ತೆ ನಿವಾಸಿ ಬೈಕರ್ ಪ್ರಶಾಂತ್ ಸನಥ್ ರಸ್ತೆ ದಾಟುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದರು. ಗಾಯಗೊಂಡ ಬೈಕರ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅವನ ಹಿಂದೆ ಇದ್ದ ಮತ್ತೊಬ್ಬ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದೆ.
ವಿಡಿಯೋ ಇಲ್ಲಿದೆ ನೋಡಿ.
Accident at Padavinangadi Mangalore @NeraNews #Mangalore #Accident #BikeAccident #RoadSafety #IndiaRoad#ChiefMinisterMKStalin #मोदी_इस्तीफा_दो #RabindranathTagore Sushant Singh Rajput Coronil pic.twitter.com/8KhzRJPn9b
— Nera News (@NeraNews) May 7, 2021