
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ COVID-19 ಬಿಕ್ಕಟ್ಟಿನ ಬಗ್ಗೆ ಸಂವಹನ ನಡೆಸಿದ ಒಂದು ದಿನದ ನಂತರ, ಪ್ರಧಾನಮಂತ್ರಿಯವರೊಂದಿಗಿನ ಸಂವಹನದಿಂದ ಯಾವುದೇ ಸಹಾಯವಿಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದರು, ಆದರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಈ ಹೇಳಿಕೆಯನ್ನು ಖಂಡಿಸಿದ್ದಾರೆ.
ಹೇಮಂತ್ ಸೊರೆನ್ ಅವರ ಟೀಕೆಗಳ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಜಗನ್ ಶುಕ್ರವಾರ, “ನನಗೆ ನಿಮ್ಮ ಬಗ್ಗೆ ಅಪಾರ ಗೌರವವಿದೆ, ಆದರೆ ಒಬ್ಬ ಸಹೋದರನಾಗಿ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ, ನಮ್ಮ ಭಿನ್ನಾಭಿಪ್ರಾಯಗಳು ಏನೇ ಇರಲಿ, ಇಂತಹ ಸಮಯದಲ್ಲಿ ರಾಜಕೀಯ ನಮ್ಮ ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆ. ” ಎಂದು ಟ್ವೀಟ್ ಮಾಡಿದರು.
"COVID-19 ವಿರುದ್ಧದ ಈ ಯುದ್ಧದಲ್ಲಿ, ನಾವು ಇತರರ ಬಗ್ಗೆ ಬೆರಳು ತೋರಿಸಲು ಸರಿಯಲ್ಲ, ಆದರೆ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ನಮ್ಮ ಪ್ರಧಾನ ಮಂತ್ರಿಯ ಕೈಗಳನ್ನು ಬಲಪಡಿಸಬೇಕು" ಎಂದರು.
ಎನ್‌ಡಿಎ ಭಾಗವಾಗಿರದ ಜಗನ್, ಪ್ರಧಾನ ಮಂತ್ರಿಯ ಬೆಂಬಲಕ್ಕೆ ಬಂದಿರುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.
Tags:
India