
ವಿನೋದ್ ಪೂಜಾರಿ ನಿರ್ದೇಶನದ ಕನ್ನಡ ಥ್ರಿಲ್ಲರ್ ಚಲನಚಿತ್ರ "ಮಾಯಾ ಕನ್ನಡಿ" ಮೇ ಮೊದಲ ವಾರದಲ್ಲಿ ಒ.ಟಿ.ಟಿ ಆಪ್ MX Player ಮೂಲಕ ರಿಲೀಸ್ ಆಗಿದ್ದು, ಕನ್ನಡ ಚಿತ್ರ ಪ್ರೇಮಿಗಳ ಮನಗೆದ್ದಿದೆ.
MX Player ಫ್ರೀ ಎಂಟರ್ಟೈನ್ಮೆಂಟ್ ಆಪ್ ಆಗಿದ್ದು, ಕನ್ನಡದ ಹಲವಾರು ಚಿತ್ರಗಳು ಅದರಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಹೆಚ್ಚು ಹೆಚ್ಚು ಜನರು ವೀಕ್ಷಿಸುವ ಚಿತ್ರಗಳ ಹೆಸರಿನ ಪಕ್ಕ "ಪೋಪ್ಯುಲರ್" ಎಂದು ಟ್ಯಾಗ್ ಮೂಡಿಬರುತ್ತದೆ.
ಮಾಯಾ ಕನ್ನಡಿ ಮೇ ತಿಂಗಳಲ್ಲಿ ರಿಲೀಸ್ ಆಗಿದ್ದು, ಈಗಾಗಲೇ MX Player ಮೊಬೈಲ್ ಆಪ್ ನಲ್ಲಿ "ಪಾಪ್ಯುಲರ್" ಟ್ಯಾಗ್ ಪಡೆದುಕೊಂಡಿದೆ.
ಪ್ರಭು ಮುಂಡ್ಕೂರು, ಕಾಜಲ್ ಕುಂದರ್, ಗಟ್ಟಿಮೇಳ ಖ್ಯಾತಿಯ ಅನ್ವಿತ ಸಾಗರ್ ಅಭಿನಯದ "ಮಾಯಾ ಕನ್ನಡಿ" ಚಿತ್ರವನ್ನು ವಿನೋದ್ ಪೂಜಾರಿ ನಿರ್ದೇಶನ ಮಾಡಿದ್ದರು. ಅಭಿಷೇಕ್ ಎಸ್ ಎನ್ ಸಂಗೀತ ಇರುವ ಈ ಚಿತ್ರಕ್ಕೆ ತುಳು ಚಿತ್ರ ನಿರ್ದೇಶಕ ರಂಜಿತ್ ಬಜ್ಫೆ ಕಾರ್ಯಾಕಾರಿ ನಿರ್ಮಾಪಕರಾಗಿದ್ದರು.
ನೀವಿನ್ನೂ ಈ ಚಿತ್ರ ನೋಡಿಲ್ಲವಾದರೆ, ಕೂಡಲೇ MX Player ಆಪ್ ನಲ್ಲಿ ಮಾಯಾ ಕನ್ನಡಿ ( Maya Kannadi ) ಎಂದು ಸರ್ಚ್ ಮಾಡಿ, ಥ್ರಿಲ್ಲರ್ ಕನ್ನಡ ಚಿತ್ರ ನೋಡಿ ಆನಂದಿಸಿ.