
ನವದೆಹಲಿ: ಮೇ 18 ರಿಂದ ಪ್ರಾರಂಭವಾಗಲಿರುವ ಮುಂದಿನ ಹಂತದ ಕರೋನವೈರಸ್ ಪ್ರೇರಿತ ಲಾಕ್‌ಡೌನ್ ಮೊದಲ ಮೂರು ಲಾಕ್‌ಡೌನ್‌ಗಳಿಗಿಂತ ಭಿನ್ನವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮೋದಿ ಈ ಕೆಳಕಂಡ ವಿಷಯಗಳ ಬಗ್ಗೆ ಮಾತನಾಡಿದರು.
- ಭಾರತದ ಸಂಸ್ಕೃತಿಗೆ ಜಗತ್ತಿನ ಶಾಂತಿಯ ಚಿಂತನೆ ಇದೆ. ವಿಶ್ವ ಕಲ್ಯಾಣವೇ ಭಾರತದ ಚಿಂತನೆ.
- ವಿಶ್ವದ ಪ್ರಗತಿಗೆ ಭಾರತದ ಕೊಡುಗೆ ಇದೆ. ಇಡೀ ಜಗತ್ತೇ ನಮ್ನನ್ನು ನೋಡುತಿದೆ. ಭಾರತದ ಮೇಲೆ ಇಡೀ ವಿಶ್ವವೇ ನಂಬಿಕೆ ಇಟ್ಟಿದೆ.
- ಭಾರತ ಸಮೃದ್ದಿ ಮತ್ತು ಭಾರತದಲ್ಲಿ ಚಿನ್ನದ ನೆಲ ಇದೆ. ನಮ್ಮ ಬಳಿ ಅತ್ತ್ಯಂತ ಪ್ರತಿಭಾನಿವಿತರಿದ್ದಾರೆ.
- ನಾವು ಆತ್ಮ ವಿಶ್ವಾಸದಿಂದ ಹೋರಾಡಬೇಕು ಎಲ್ಲರೂ.
- ನಮಗೆ ಕರೋನ ಸಂದೇಶ ಕೊಡುತಿದೆ. ವಿಶ್ವ ದಲ್ಲಿ 42 ಲಕ್ಷ ಜನ ಕರೋನ ಸೋಂಕಿತರಿದ್ದಾರೆ. ಭಾರತ ಇದರಿಂದ್ದ ಎದ್ದು ಬರುತ್ತದೆ.
- ಭಾರತ ದಲ್ಲಿ ಪ್ರತಿದಿನ 2 ಲಕ್ಷ ಮಾಸ್ಕ್ ಉತ್ಪಾದನೆ.
- ಭೂಮಿ ತಾಯಿಯನ್ನು, ತಾಯಿ ಅಂತ ಕರಿಯೋರು ನಾವು. ವಸುದೈವ ಕುಟುಂಬ ನಮ್ಮದು.
- ಸ್ವಾವಲಂಬಿ ಭಾರತಕ್ಕೆ 5 ಆಧಾರ್ ಕಂಬಗಳು.
- ವಿಶೇಷ ಪ್ಯಾಕೇಜ್ ಘೋಷಣೆ. 2020ಕ್ಕೆ 20 ಲಕ್ಷ ಕೋಟಿಪ್ಯಾಕೇಜ್ . ಜಿಡಿಪಿ ಯ 10 ರಷ್ಟು ಆರ್ಥಿಕ ಪ್ಯಾಕೇಜ್.
- ಸ್ವಾಲಂಬಿ ಭಾರತಕ್ಕಾಗಿ ಪ್ಯಾಕೇಜ್ ಘೋಷಣೆ. ರೈತರು.ಬಡವರಿಗೆ, ಮೀನುಗಾರರಿಗೆ, ಊದ್ಯಮಿಗಳಿಗೇ, ಕಾರ್ಮಿಕರಿಗೆ, ಸಣ್ಣ ಮಧ್ಯಮ ಕೈಗಾರಿಕೆ ಗಳಿಗೆ ವಿಷೇಶ ಪ್ಯಾಕೇಜ್. ನಾಳೆಯಿಂದ ಘೋಷಣೆ. ನಾಳೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರಿಂದ ಘೋಷಣೆ.
- ಬಂಡವಾಳ ಹೂಡಿಕೆ ಹೆಚ್ಚಳ, ತೆರಿಗೆ ಸುಧಾರಣಾ ಕ್ರಮ.
- ನನಗೆ ಸಂಪೂರ್ಣ ವಿಶ್ವಾಸ ಇದೆ ನಿಮ್ಮೆಲ್ಲರ ಸಹ ಕಾರದಿಂದ ಭಾರತ ಈ ಸಂಕಷ್ಟ ದಿಂದ ಪಾರಾಗುತ್ತೆ.
- ದೀರ್ಘ ಕಾಲದ ವರೆಗೆ ಕರೋನ ಇರುತ್ತೆ. ಆದರೆ ಹೊಸ ರೂಪ ದೊಂದಿಗೆ ಲಾಕ್ ಡೌನ್ 4. ಜಾರಿ. ಮೇ 17 ಕ್ಕೂ ಮೊದಲು ಲಾಕ್ ಡೌನ್ ಸ್ವರೂಪ ತಿಳಿದು ಕೊಳ್ಳುತ್ತೇವೆ. ಇದುವರಿಗೂ ಲಾಕ್ ಡೌನ್ ಗಿಂತ ಭಿನ್ನ ಇರುತ್ತೆ.