2019 ವರ್ಲ್ಡ್ ಕಪ್ ತಂಡದಲ್ಲಿ ಧೋನಿ ಇರೊಲ್ಲ - 'ರೋಟೇಶನ್ ನೀತಿ" ಜಾರಿ

og:image
ಪಾಲ್ಕೆಲ್: ಯುವರಾಜ್ ಸಿಂಗ್ ಅವರು ಈಗಾಗಲೇ ಭಾರತೀಯ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ ಮತ್ತು ಈಗ ಮತ್ತೊಬ್ಬ ಅನುಭವಿ ಆಟಗಾರ ಎಂಎಸ್ ಧೋನಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಸಫಲರಾಗುತ್ತಾರ? ಎಂದು ನೋಡಬೇಕಾಗಿದೆ.

ಸೋಮವಾರ, ಮುಖ್ಯ ಆಯ್ಕೆಗಾರ ಎಂಎಸ್ಕೆ ಪ್ರಸಾದ್ ಧೋನಿ ವಿಷಯದಲ್ಲೂ  ಯುವರಾಜ್ ಅವರ ವಿಷಯದಲ್ಲಿ ಉಪಯೋಗಿಸಿದ ಪದಗಳಾದ "ವಿಶ್ರಾಂತಿ" ಮತ್ತು "ಕೈಬಿಡಲಿಲ್ಲ" ಎಂದು ಸಾಮಾನ್ಯ ಸಾಲಿಗೆ ಅಂಟಿಕೊಂಡಿದ್ದರು. ಈವಾಗ 2019 ರ ವಿಶ್ವಕಪ್ ಟೀಮ್ ನಲ್ಲಿ ಧೋನಿ ಕಾಣಿಸಿಕೊಳ್ಳುತ್ತಾರೆಯೇ ಎಂದು ಕೇಳಿದಾಗ ನಾನು ಯಾವುದನ್ನೂ ಕಂಫರ್ಮ್ ಮಾಡಲ್ಲ ಎಂದರು.

"ಕಾದು ನೋಡೋಣ, ಧೋನಿಯವರು ಒಂದು ದಂತಕಥೆ, ಅವರ ಬಗ್ಗೆ ಯಾವುದೇ ನಿರ್ಧಾರ ತಗೊಂಡರೂ ನಾವು ಅದನ್ನು ಸಾರ್ವಜನಿಕವಾಗಿ ಹೇಳಲು ಬಯಸುವುದಿಲ್ಲ, ಆದರೆ ಹೌದು, ನಮಗೆ ಒಂದು ಯೋಜನೆ ಇದೆ" ಎಂದು ಮಾಜಿ ಭಾರತ ವಿಕೆಟ್ಕೀಪರ್ ಹೇಳಿದರು. ಆದರೆ ಧೋನಿಯವರು ತಂಡದ ಖಾಯಂ ಸದಸ್ಯರಾಗುವ ಕಾಲ ಮುಗಿದು ಹೋಗಿದೆ ಎಂದು ಪ್ರಸಾದ್ ಒಪ್ಪಿಕೊಂಡರು. "ನಾವು ತಂಡದ ಎಲ್ಲಾ ಭಾರತೀಯ ಕ್ರಿಕೆಟಿಗರು ಚೆನ್ನಾಗಿ ಆಡಬೇಕೆಂದು ಬಯಸುತ್ತೇವೆ, ಅದಕ್ಕಾಗಿ ನಾವು ಈಗಲೇ ಪರ್ಯಾಯಗಳನ್ನು ನೋಡಬೇಕಾಗಿದೆ, "ಎಂದು 42 ವರ್ಷದ ಪ್ರಸಾದ್ ಹೇಳಿದರು.

ಧೋನಿಯವರ ವಯಸ್ಸು ಮುಂದಿನ ವಿಶ್ವಕಪ್ ಸಮಯದಲ್ಲಿ 38 ವರ್ಷದವರಾಗಿರುತ್ತಾರೆ.

ಹೊಸ ಸರದಿ ನೀತಿ

ಮುಂದಿನ ವಿಶ್ವಕಪ್ಗೆ ಆಟಗಾರರನ್ನು ಗುರುತಿಸಲು 'ರೋಟೇಶನ್ ನೀತಿ (ತಿರುಗುವಿಕೆ ನೀತಿ)' ಯನ್ನು ಪರಿಚಯಿಸಲು ಆಯ್ಕೆಗಾರರು ನಿರ್ಧರಿಸಿದ್ದಾರೆ, ಯುವರಾಜ್ ಅವರನ್ನು ಮುಂದಿನ ಪಂದ್ಯದಿಂದ ಹೊರಗಿಡಲು ಇದೇ ಕಾರಣ ಎಂದು ವಿವರಿಸಿದರು. ಆಯ್ಕೆಗಾರರು 25 ಆಟಗಾರರನ್ನು ಗುರುತಿಸಿದ್ದಾರೆ. "ನಾವು ಯುವರಾಜ್ ರನ್ನು ತಂಡದಿಂದ ಕೈಬಿಟ್ಟಿದ್ದೇವೆ ಎಂದು ನೀವು ವರದಿ ಮಾಡಿದ್ದೀರಿ, ಆದರೆ ನಮ್ಮ ನಡೆ ನನಗೆ ಸ್ಪಷ್ಟವಾಗಿದೆ; ಮುಂದಿನ ಕೆಲವು ನಾಲ್ಕು-ಐದು ತಿಂಗಳಲ್ಲಿ ಪರಿಗಣಿಸಲಾಗುವ ಕೆಲವು ಆಟಗಾರರನ್ನು (ಸುಮಾರು 25) ನಾವು ಗುರುತಿಸಿದ್ದೇವೆ. ಈ ಅವಧಿಯಲ್ಲಿ ಅವರನ್ನು ರೋಟೇಶನ್ ಮೂಲಕ ಪರೀಕ್ಷಿಸಿ, ನಂತರ ನಾವು ವಿಶ್ವಕಪ್ ಆಡಲು ಹೋಗುವ ಆಟಗಾರರು ಯಾರು ಎಂದು ಒಂದು ಸ್ಪಷ್ಟ ಚಿತ್ರಕ್ಕೆ ಬರುತ್ತೇವೆ." ಎಂದು ಪ್ರಸಾದ್ ಹೇಳಿದರು.

English Summary:Mahendra Sign Dhoni might be dropped from Cricket World cup 2019.
Tags : Cricket, World Cup, Dhoni, Selection, Team
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ