
ಗಜಿಯಾಬಾದ್: ಏಪ್ರಿಲ್ 29 ರಂದು ಉತ್ತರ ಪ್ರದೇಶ ಪೊಲೀಸರು 638 ಆಮ್ಲಜನಕ ಸಿಲಿಂಡರ್‌ಗಳೊಂದಿಗೆ ಸಮೀರ್‌ನನ್ನು ಗಜಿಯಾಬಾದ್‌ನಲ್ಲಿ ಬಂಧಿಸಿದ್ದಾರೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯ ಮಧ್ಯೆ ಹತಾಶ ರೋಗಿಗಳಿಗೆ ಈ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪೊಲೀಸರು ಸುಮಾರು 638 ಆಮ್ಲಜನಕ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದು, ಅರೋಪಿ ಸಮೀರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸಣ್ಣ ಮತ್ತು ದೊಡ್ಡ ಆಮ್ಲಜನಕ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಕ್ರಮವಾಗಿ ಹತ್ತುಸಾವಿರ ಮತ್ತು ಮೂವತ್ತು ಸಾವಿರ ರೂಪಾಯಿಗಳಿಗೆ ಮಾರಾಟಮಾಡುತ್ತಿದ್ದ. ದೆಹಲಿಯ ಶಹದಾರಾ ನಿವಾಸಿಯಾಗಿರುವ ಸಮೀರ್, ಖಾಲಿ ಸಿಲಿಂಡರ್‌ಗಳನ್ನು 10,000 ರಿಂದ 30,000 ರೂ.ಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್‌ಎಸ್‌ಪಿ ಅಮಿತ್ ಪಾಠಕ್ ತಿಳಿಸಿದ್ದಾರೆ. ಸಮೀರ್ ಕೈಯಿಂದ ಖಾಲಿ ಸಿಲಿಂಡರ್ ಪಡೆದು, ರೋಗಿಗಳು ಅದಕ್ಕೆ ಆಮ್ಲಜನಕ ಬೇರೆಕಡೆ ತುಂಬಿಸಿಕೊಳ್ಳುತ್ತಿದ್ದರು.
ಗಜಿಯಾಬಾದ್ ಪೊಲೀಸರು ಸಮೀರನ ಮೇಲೆ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕಾರ್ಖಾನೆಯ ಮಾಲೀಕ ದೆಹಲಿಯ ಪ್ರೀತ್ ವಿಹಾರ್ ಕಾಲೋನಿಯ ಜೈ ಗೋಪಾಲ್ ಮೆಹ್ತಾ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದರು. ಅಗತ್ಯ ಸರಕುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಕಾರ್ಖಾನೆಯ ಮಾಲೀಕರನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ ಎಂದು ಪಾಠಕ್ ತಿಳಿಸಿದ್ದಾರೆ.