
ರಾಯಚೂರು : ನಗರದ ನಟರಾಜ ಕಾಲನಿಯ ಸರ್ಕಾರಿ ಶಿಕ್ಷಕ ಬಸವರಾಜ (೪೫) ಮೂಗಿಗೆ ಲಿಂಗೆಹುಳಿ ರಸ ಹಿಂಡಿಕೊಂಡು ನಿಧನರಾಗಿದ್ದಾರೆಂದು ಸುದ್ಧಿ ಹರಡಿತ್ತು. ಆದರೆ ಇಂದು ಮ್ರತರ ಕುಟುಂಬದವರು ಸಾವಿಗೆ ನಿಜಕಾರಣ ಬಯಲು ಮಾಡಿದ ಮೇಲೆ ಕರ್ನಾಟಕದ ಪತ್ರಿಕೆಗಳ ನಡುವೆ ಇರುವ ವ್ರತ್ತಿ ಮತ್ಸರ ಬಯಲಾಗಿದೆ.
ಮ್ರತರ ಸಹೋದರ ಮಹಾಂತೇಶ, ಮಾಧ್ಯಮದೊಂದಿಗೆ ಮಾತನಾಡುತ್ತಾ, "ನಮ್ಮ ಸಹೋದರನಿಗೆ ಬಿಪಿ ಲೋ ಆಗಿತ್ತು, ಆದರಿಂದ ಹ್ರದಯಾಘಾತವಾಗಿತ್ತು, ಅವರನ್ನು ಕೂಡಲೇ ನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಿದರೂ, ಅವರು ಮ್ರತಪಟ್ಟಿದ್ದಾರೆಂದು ವೈದ್ಯರು ಖಚಿತಪಡಿಸಿದ್ದಾರೆ. "
ಆಸ್ಪತ್ರೆಯ ವೈದ್ಯರೂ ಕೂಡಾ, ಬಸವರಾಜು ಮರಣಕ್ಕೆ ಕಾರಣ ಏನು ಎಂದು ತಿಳಿದುಬಂದಿಲ್ಲ. ಅವರು ಆಸ್ಪತ್ರೆಗೆ ಬರುವ ಮೊದಲೇ ತೀರಿಹೋಗಿದ್ದರು. ಆದರಿಂದ ಹೇಗೆ ಪ್ರಾಣ ಹೋಯಿತು ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಅಂತೆಯೇ, ಲಿಂಬೆ ರಸ ಮೂಗಿಗೆ ಬಿಟ್ಟು ಪ್ರಾಣ ಕಳೆದುಕೊಂಡ ಎಂದು ಸುಳ್ಳು ಸುದ್ದಿ ಹಬ್ಬಿಸಿರುವ ಎಲ್ಲಾ ಮಾಧ್ಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಹೋದರ, ನನ್ನ ಸಹೋದರನ ಸಾವಿಗೆ ಏನೇನೋ ಕಾರಣ ನೀಡಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುತ್ತಿದ್ದರೆ ಎಂದು ಬೇಸರ ವ್ಯಕ್ತ ಪಡಿಸಿದರು.
ಯಾರದೋ ಮೇಲಿನ ಮತ್ಸರಕ್ಕೆ, ಇನ್ನೊಬ್ಬರ ಬಗ್ಗೆ ಸುಳ್ಳುಸುದ್ಧಿ ಹಬ್ಬಿಸಿ, ಅವರ ಸಾವಿನಲ್ಲೂ ವಿಕ್ರತಿ ಮೆರೆದಿರುವ ಪತ್ರಿಕೆಗಳ ಮತ್ಸರಕ್ಕೆ ಏನು ಹೇಳಬೇಕೋ ತಿಳಿಯದಾಗಿದೆ.