ಪಾಕಿಸ್ತಾನದಲ್ಲಿ ಹಿಂದೂ ದೇಗುಲ ನೆಲಸಮ - ವಿಡಿಯೋ ವೈರಲ್

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ಅಮೃತಸರ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಧಾರ್ಮಿಕ ಭಾವನೆಗಳ  ಮೇಲೆ ಧಾಳಿ ಮುಂದುವರಿದಿದ್ದು, ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ (ಕೆಪಿಕೆ) ಪ್ರಾಂತ್ಯದ ಕರಕ್ ಜಿಲ್ಲೆಯ ಹಿಂದೂ ದೇವಾಲಯವನ್ನು, ಉದ್ರಿಕ್ತ  ಜನಸಮೂಹ ಬುಧವಾರ ನೆಲಸಮ ಮಾಡಿದೆ.

ಮೂಲಗಳ ಪ್ರಕಾರ, ಉಗ್ರಗಾಮಿ ಗುಂಪಿನ ಬೆಂಬಲವನ್ನು ಹೊಂದಿರುವ ಕರಕ್‌ನ ಮುಸ್ಲಿಂ ಮೌಲ್ವಿಯೊಬ್ಬರು, ಸ್ಥಳೀಯ ಮುಸ್ಲಿಮರನ್ನು ಹಿಂದೂ ಸಮುದಾಯದ ವಿರುದ್ಧ ಎತ್ತಿಕಟ್ಟಿ, ದೇವಾಲಯವನ್ನು ಕೆಡವಲು ಪ್ರಚೋದಿಸಿದರು ಎಂದು ಆರೋಪಿಸಲಾಗಿದೆ.

ಅಂತರ್ಜಾಲದಲ್ಲಿ ವೈರಲ್ ಆಗಿರುವ ವೀಡಿಯೊವೊಂದು ದೊಡ್ಡ ಸಂಖ್ಯೆಯ ಜನರು ದೇವಾಲಯವನ್ನು ಸುತ್ತಿಗೆಯಿಂದ ನೆಲಸಮ ಮಾಡುವುದನ್ನು ತೋರಿಸುತ್ತದೆ.


ವೀಡಿಯೊದಲ್ಲಿ ಜನಸಮೂಹವು ಕಟ್ಟಡದ ಒಂದು ಭಾಗದಿಂದ ದೇವಾಲಯದ ವಸ್ತುಗಳನ್ನು ಎಸೆಯುವುದನ್ನು ಕಾಣಬಹುದು.

ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತ ಇಹ್ತೇಶಮ್ ಅಫಘಾನ್ ಈ ಘಟನೆಯನ್ನು "ನಾಚಿಕೆಗೇಡು" ಎಂದು ಕರೆದರು ಮತ್ತು ಪಾಕಿಸ್ತಾನ ತನ್ನ ಅಲ್ಪಸಂಖ್ಯಾತರೊಂದಿಗೆ ನಡೆದುಕೊಳ್ಳುವ ವಿಧಾನವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

English Summary: । Today in Pakistan. A charged mob destroyed a Hindu temple by setting it on fire and razing it to the ground in Khyber Pakhtunkhwa district of Karak. The incident took place after a JUI-F rally was held nearby where speakers delivered fiery speeches.  NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.