
ನವದೆಹಲಿ: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ನಿರ್ಮಾಣದ ಭೂಮಿ ಪೂಜಗೆ ಉಂಟಾಗಿದ್ದ ಖಂಟಕವನ್ನು ತೆರವುಗೊಳಿಸಲಾಗಿದೆ. ರಾಮ ದೇವಾಲಯದ ಭೂಮಿ ಪೂಜೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಈ ಅರ್ಜಿಯನ್ನು ಸಾಕೇತ್ ಗೋಖಲೆ ಸಲ್ಲಿಸಿದ್ದರು.
ರಾಮ್ ಮಂದಿರದ ಭೂಮಿ ಪೂಜೆಯ ಐತಿಹಾಸಿಕ ಘಟನೆಗೆ ಕೇವಲ ಕೆಲವೇ ದಿನಗಳು ಬಾಕಿ ಇರುವಾಗ, ಸಾಕೇತ್ ಗೋಖಲೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಗೋಖಲೆ ಅವರು ರಾಹುಲ್ ಗಾಂಧಿಯವರ ಜೊತೆಗಿರವ ಫೋಟೊ ಒಂದು ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ, ಅಯೋಧ್ಯೆಯಲ್ಲಿ ಭೂಮಿ ಪೂಜೆ ವಿರುದ್ಧ ಸಲ್ಲಿಸಿದ್ದ ಅರ್ಜಿಯಲ್ಲಿ, ಭೂಮಿ ಪೂಜೆ ಅನ್ಲಾಕ್ -2 ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಗೋಖಲೆ ಹೇಳಿದ್ದಾರೆ. ಭೂಮಿ ಪೂಜೆ ನಡೆಸುವುದು ಕೋವಿಡ್ -19 ರ ಅನ್ಲಾಕ್ -2 ರ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ ಎಂದು ಪಿಐಎಲ್ ತಿಳಿಸಿದೆ. ಭೂಮಿ ಪೂಜೆಯಲ್ಲಿ ಮುನ್ನೂರು ಜನರು ಸೇರುತ್ತಾರೆ, ಇದು ಕೋವಿಡ್ ನಿಯಮಗಳಿಗೆ ವಿರುದ್ಧವಾಗಿರುತ್ತದೆ ಎಂದು ಉಲ್ಲೇಖಿಸಲಾಗಿತ್ತು.
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.
ಇದನ್ನೂ ಓದಿ :
Tags:
India