
ದುಬೈ / ಇಸ್ಲಾಮಾಬಾದ್: ವಿಶ್ವದಾದ್ಯಂತ ಕೆಲಸ ಮಾಡುವ ಪಾಕಿಸ್ತಾನಿ ಪೈಲಟ್‌ಗಳ ವಿಶ್ವಾಸಾರ್ಹತೆ ಈಗ ಅಪಾಯದಲ್ಲಿದೆ, ಅವರಲ್ಲಿ ಅನೇಕರಿಗೆ “ಸಂಶಯಾಸ್ಪದ” ಹಾರುವ ಪರವಾನಿಗೆ ದೊರಕಿವೆ ಎಂಬ ವರದಿಗಳು ಬಂದಿವೆ. ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರದ (ಪಿಸಿಎಎ) ಪರವಾನಗಿ ಮತ್ತು ಸುರಕ್ಷತೆಯ ಮೇಲ್ವಿಚಾರಣೆಯಲ್ಲಿನ ಗಂಭೀರ ಕೊರತೆಗಳ ಬಗ್ಗೆ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಕಳವಳ ವ್ಯಕ್ತಪಡಿಸಿದೆ.
2020 ರ ಮೇ 22 ರಂದು ಕರಾಚಿಯಲ್ಲಿ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾದ ನಂತರ ಪೈಲಟ್‌ಗಳ ಚಲಾವಣಾ ಪರವಾಣಿಗೆ ಬಗ್ಗೆ ವಿವಾದ ಪ್ರಾರಂಭವಾಯಿತು, ಪಾಕಿಸ್ತಾನದಲ್ಲಿ ನಡೆದಿದ್ದ ವಿಮಾನ ಅಪಘಾತದಲ್ಲಿ 97 ಜನರು ಬಲಿಯಾಗಿದ್ದರು.
ಪಾಕಿಸ್ತಾನದ ಪೈಲಟ್‌ಗಳು ತಮ್ಮ ದೇಶದಲ್ಲಿ ಮತ್ತು ಪ್ರಪಂಚದಾದ್ಯಂತದ ವಿವಿಧ ವಿಮಾನಯಾನ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನದ ವಾಯುಯಾನ ಸಚಿವ ಗುಲಾಮ್ ಸರ್ವಾರ್ ಖಾನ್ ಅವರು ದೇಶದಲ್ಲಿ “ನಕಲಿ” ಹಾರುವ ಪರವಾನಗಿಗಳ ದಂಧೆಯ ಬಗ್ಗೆ ಬಹಿರಂಗಪಡಿಸಿದ ನಂತರ ಪಾಕಿಸ್ತಾನಿ ಪೈಲಟ್ಗಳ ಬಗ್ಗೆ ಸಂಶಯ ಉಂಟುಮಾಡಿದೆ. ಪಾಕಿಸ್ತಾನದ ಶೇಕಡಾ 40 ರಷ್ಟು (ಸುಮಾರು 262) ಸಕ್ರಿಯ ಪೈಲಟ್‌ಗಳು "ಸಂಶಯಾಸ್ಪದ" ಹಾರುವ ಪರವಾನಗಿಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.
109 ವಾಣಿಜ್ಯ ಮತ್ತು 153 ಸರಕು ಸಾರಿಗೆ ಪೈಲಟ್‌ಗಳು ಸೇರಿದಂತೆ ಒಟ್ಟು 262 ಪೈಲಟ್‌ಗಳ ವಿರುದ್ಧದ ವಿಚಾರಣೆಯ ತೀರ್ಮಾನಕ್ಕೆ ಬಾಕಿ ಉಳಿದಿದೆ.
ಮೇ 22 ರಂದು ಕರಾಚಿಯಲ್ಲಿ ನಡೆದ ಪಿಐಎ ವಿಮಾನ ಅಪಘಾತದ ಪ್ರಾಥಮಿಕ ತನಿಖಾ ವರದಿಯ ಭಾಗವಾಗಿ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದರು. ವಿಮಾನದ ಪೈಲಟ್‌ಗಳು ಮತ್ತು ಕರಾಚಿಯ ವಾಯು ಸಂಚಾರ ನಿಯಂತ್ರಣ ಗೋಪುರವನ್ನು ನಿರ್ವಹಿಸುವವರು ಪಾಕಿಸ್ತಾನದಲ್ಲಿ ನಡೆದ ಭೀಕರ ಅಪಘಾತಕ್ಕೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
Tags:
World