
ಬೆಂಗಳೂರು: ಕನ್ನಡ ಹಿರಿಯ ನಟಿ ಜಯಂತಿ ಹಲವು ದಿನಗಳಿಂದ ಅಸ್ತಮ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅನಾರೋಗ್ಯದಿಂದ ಬಳುತ್ತಿರುವ ಜಯಂತಿ ಅವರಿಗೆ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ.
ಜಯಂತಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಅವರ ಮಗ ಕೃಷ್ಣಕುಮಾರ್, ಅಸ್ತಮ ಸಮಸ್ಯೆಯಿಂದ ಎರಡು ದಿನಗಳ ಹಿಂದೆಯೇ ತಾಯಿಯವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದೇವೆ ಎಂದರು.
ಇನ್ನು, ಜಯಂತಿಯವರಿಗೆ ಕೊರೊನಾ ಇದೆಯಾ ಎಂದು ಟೆಸ್ಟ್ ಮಾಡಲು ವೈದ್ಯರು ಸಲಹೆ ನೀಡಿದ್ದು, ಅವರಿಗೆ ಕೊರೊನಾ ಟೆಸ್ಟ್ ಕೂಡ ನಡೆಸಿದ್ದು, ವರದಿಯಲ್ಲಿ ನೆಗಟಿವ್ ಬಂದಿದೆ. ಆದರಿಂದ ಯಾವುದೇ ತೊಂದರೆ ಇಲ್ಲ. ಅಮ್ಮನನ್ನು ತುರ್ತು ಚಿಕಿತ್ಸಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ
Tags:
Entertainment