
ಚಲನಚಿತ್ರ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ, ರಿಯಾ ಚಕ್ರವರ್ತಿ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದಾರೆಂದು ಹೇಳುವ ಮೂಲಕ ಮೌನ ಮುರಿದರು. ವಿಷಯ ನ್ಯಾಯಾಲಯದಲ್ಲಿದೆ ಆದ್ದರಿಂದ ನಾನು ಮೌನವಾಗಿದ್ದೇನೆ, ಸತ್ಯಕ್ಕೆ ಜಯ ಸಿಗುವ ವಿಶ್ವಾಸ ನನಗಿದೆ ಎಂದು ರಿಯಾ ವಿಡಿಯೊ ಮೂಲಕ ಹೇಳಿಕೆ ನೀಡಿದ್ದಾಳೆ.
ರಿಯಾ ಚಕ್ರವರ್ತಿ ಸಾಮಾಜಿಕ ಮಾಧ್ಯಮದಲ್ಲಿ ಸಣ್ಣ ವಿಡಿಯೋವೊಂದನ್ನು ಪೋಸ್ಟ್ ಮಾಡಿ, 'ಈ ವಿಷಯ ನ್ಯಾಯಾಲಯದಲ್ಲಿದೆ, ಹಾಗಾಗಿ ನಾನು ಮೌನವಾಗಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಸತ್ಯ ಬರುವುದು ಖಚಿತ. ಸತ್ಯಮೇವ ಜಯತೆ.' ರಿಯಾ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟನ ಮರಣದ ನಂತರ ರಿಯಾ ಹೇಳಿಕೆ ನೀಡಿರುವ ಮೊದಲ ವಿಡಿಯೋ ಇದು. ಸುಶಾಂತ್ ಅವರ ತಂದೆ ರಿಯಾ ವಿರುದ್ಧ ಎಫ್ಐಆರ್ ದಾಖಲಿಸಿ, ಅನೇಕ ಗಂಭೀರ ಆರೋಪಗಳನ್ನು ಮಾಡಿರುವುದರಿಂದ ನಟಿಯು ತಮ್ಮನ್ನು ಸಮಜಾಯಿಸಲು ಈ ಹೇಳಿಕೆ ನೀಡಿದ್ದಾರೆ. ಆದರೆ ಈ ಸಂದರ್ಭದಲ್ಲಿ, ರಿಯಾ ಚಕ್ರವರ್ತಿ ಕೂಡ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿದ್ದು, ತಾನು ನಿರಪರಾಧಿ ಎಂದು ಘೋಷಿಸುವುದಲ್ಲದೆ, ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ಆಧಾರರಹಿತವೆಂದು ತಳ್ಳಿಹಾಕಿದ್ದಾಳೆ.
First Reaction of #RheaChakroborty :I believe I will get justice, Lots of horrible things being said about me in electronic media, I have immense faith in god and in judiciary,Truth shall prevails "Satymev jayte" Bla Bla
— Kangana Ranaut (@KanganaOffical) July 31, 2020
U Have Nothing To say Or Prove Stop Acting #MahaGovtSoldOut pic.twitter.com/ps2fTKT07p
ಸುಶಾಂತ್ ಸಾವನ್ನಪ್ಪಿದಾಗಿನಿಂದ, ತನಗೆ ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರಿಯಾ ಅವರ ವಕೀಲರು ಬಿಹಾರ ಪೊಲೀಸರಿಗೆ ತನಿಖೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಅವರ ಪ್ರಕಾರ, ಆ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಬೇಕು. ಒಂದೇ ಪ್ರಕರಣದಲ್ಲಿ ಎರಡು ಸ್ಥಳಗಳಲ್ಲಿ ಯಾವುದೇ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ವಾದಿಸಲಾಗುತ್ತಿದೆ.
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.
ಇದನ್ನೂ ಓದಿ :