ಧಾರವಾಡ: ಮದ್ಯದ ಮತ್ತಿನಲ್ಲಿ ಗುಡಿಸಾಗರ ಗ್ರಾಮದ ಭೀರಪ್ಪ ಕಟಿಗಾರ (40) ತನ್ನ ಪತ್ನಿ ಫಕೀರವ್ವ (34) ಹಾಗೂ ಮಗಳಿಗೆ ಬೆಂಕಿಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡಿರುವ ಘಟನೆ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ನಡೆದಿದೆ.
ಬೆಂಕಿ ಹಚ್ಚಿಕೊಂಡು ತೀವ್ರ ಗಾಯಗೊಂಡಿದ್ದ ಭೀರಪ್ಪ ಹಾಗೂ ಪತ್ನಿ ಫಕೀರವ್ವ (34) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 12 ವರ್ಷದ ಮಗಳ ಪರಿಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ಘಟನೆ ನಡೆದ ರಾತ್ರಿ, ಭೀರಪ್ಪ ಮದ್ಯ ಕುಡಿದು ಮನೆಗೆ ಬಂದಿದ್ದ. ಈ ವೇಳೆ ದಂಪತಿಯ ಮಧ್ಯೆ ಜಗಳವಾಗಿದ್ದು, ಕೋಪಗೊಂಡ ಆರೋಪಿ ಪೆಟ್ರೋಲ್ ಸುರಿದು ಪತ್ನಿ ಹಾಗೂ ಮಗಳಿಗೆ ಬೆಂಕಿ ಹಚ್ಚಿದ್ದಾನೆ. ಅಷ್ಟೇ ಅಲ್ಲದೆ ತಾನೂ ಬೆಂಕಿ ಹಚ್ಚಿಕೊಂಡಿದ್ದ. ಇದನ್ನು ನೋಡಿದ ನೆರೆಹೊರೆಯವರು ಬೆಂಕಿ ನಂದಿಸಿ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಭೀರಪ್ಪ ಮೊದಲು ಸಾವನ್ನಪ್ಪಿದ್ದಾನೆ. ಬಳಿಕ ಪತ್ನಿ ಫಕೀರವ್ವ ಕೂಡ ಮೃತಪಟ್ಟಿದ್ದು, ಮಗಳು ತಂದೆಯ ಕೃತ್ಯದಿಂದಾಗಿಯೇ ಅನಾಥವಾಗುವ ಸ್ಥಿತಿ ಬಂದಿದೆ. ಈ ಸಂಬಂಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಬೆಂಕಿ ಹಚ್ಚಿಕೊಂಡು ತೀವ್ರ ಗಾಯಗೊಂಡಿದ್ದ ಭೀರಪ್ಪ ಹಾಗೂ ಪತ್ನಿ ಫಕೀರವ್ವ (34) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 12 ವರ್ಷದ ಮಗಳ ಪರಿಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.