ಐಟಿ ರೈಡ್ ವಿಡಿಯೋ ಶೂಟ್ ಮಾಡಿ ಜನರಿಗೆ ತೋರಿಸಿ ಎಂದ ಉಪೇಂದ್ರ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
"ನಮ್ಮಗೆಲ್ಲ ಬೇಕಾಗಿರುವುದು ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ. ದೊಡ್ಡ ದೊಡ್ಡ ವ್ಯಕ್ತಿಗಳ ಮನೆ ಮೇಲೆ ನಡೆಯುವ ಐಟಿ ದಾಳಿಯನ್ನ ಕ್ಯಾಮೆರಾದಲ್ಲಿ ಶೂಟ್ ಮಾಡಿ ಜನರಿಗೆ ತೋರಿಸಬೇಕು. ನಿಜವಾದ ಸತ್ಯ ಏನು ಎಂಬುದು ಜನಸಾಮಾನ್ಯರಿಗೆ ಗೊತ್ತಾಬೇಕು" ಹೀಗೆಂದು ಟ್ವೀಟ್ ಮಾಡಿದ್ದು ಬೇರಾರು ಅಲ್ಲಾ, ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ.

ಇತ್ತೀಚೆಗೆ ಕರ್ನಾಟಕ ಪವರ್ ಮಿನಿಸ್ಟರ್ ಮೇಲೆ ಐ.ಟಿ ಧಾಳಿ ಆದನಂತರ ಯಾರನ್ನೂ ನೇರವಾಗಿ ಉಲ್ಲೇಖಿಸದೆ ಟ್ವೀಟ್ ಮಾಡಿರುವ ಉಪೇಂದ್ರ, ರಾಜಕಾರಣ, ರಾಜಕೀಯ, ರಾಜನೀತಿ ಬೇಕೆಂದು ಯಾರು ಬಯಸಬಾರದು ಐಟಿ ದಾಳಿಯ ಬಗ್ಗೆ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ಚಲನಚಿತ್ರನಟರು ಯಾರೂ ಯಾವತ್ತೂ ರಾಜಕೀಯ ವ್ಯಕ್ತಿಗಳ ಬಗ್ಗೆ ಧ್ವನಿಯೆತ್ತುವ ಧೈರ್ಯ ಮಾಡಲ್ಲ. ಯಾಕೆಂದರೆ ಎಲ್ಲಾದರೂ ರಾಜಕೀಯ ವ್ಯಕ್ತಿಗಳ ಬಗ್ಗೆ ಬರೆದರೆ ಎಲ್ಲಿ ತನ್ನ ವ್ರತ್ತಿಗೆ ಕುತ್ತು ಬರುವುದೋ ಎಂದು ಭಯದಿಂದ ಯಾವುದೇ ನಟರು ಕಮೆಂಟ್ ಮಾಡದೆ ತಮ್ಮ ಪಾಡಿಗೆ ಇದ್ದರೆ, ಉಪೇಂದ್ರ ಮಾತ್ರ ತನ್ನ ಟ್ವೀಟ್ ಮೂಲಕ ಕೇಂದ್ರ ಸರ್ಕಾರ ತೆಗೆದುಕೊೞುತ್ತಿರುವ ಜನಪರ ಕೆಲಸಗಳನ್ನು ಹೊಗಳುತ್ತಿರುತ್ತಾರೆ.