ರೂಪೇಶ್ ಶೆಟ್ಟಿಗೆ "ಅಮ್ಮೆರ್ ಪೊಲೀಸಾ?" ಎಂದ ಸೂರಜ್ ಶೆಟ್ಟಿ

og:image
ಮಂಗಳೂರು ಃ ತುಳುವಿನ ಸುಪರ್ ಹಿಟ್ ಚಿತ್ರಗಳ ನಿರ್ದೇಶಕ ಸೂರಜ್ ಶೆಟ್ಟಿ "ಅಮ್ಮೆರ್ ಪೊಲೀಸಾ" ಎಂಬ ಸಿನಿಮಾ ಅನೌನ್ಸ್ ಮಾಡಿದಾಗ, ಸಹಜವಾಗಿ ನಾಯಕ ಮತ್ತು ನಾಯಕಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇನ್ನು ಹಲವರು, ಸೂರಜ್ ಶೆಟ್ಟಿ ಕಾಮೆಡಿ ಸಿನಿಮಾ ಮಾಡುವವರು, ಆದರಿಂದ ಹೀರೋ ಯಾರಾದರೇನು, ತಮ್ಮ ನೆಚ್ಚಿನ ಕಾಮೆಡಿ ನಟರಿದ್ದರೆ ಸಾಕು ಎಂದು ಕಾಯುತ್ತಾ ಇರುತ್ತಾರೆ. ಹಾಗೇನೆ, ಸೂರಜ್ ಶೆಟ್ಟಿ ಕೂಡಾ ಈ ಹಿಂದೆ ನಾಯಕನಟರಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡಿರಲಿಲ್ಲ. ಹೊಸಬರನ್ನೇ ಹೀರೋ ಮಾಡಿ ಯಶಸ್ವಿಯಾದವರು.

ಆದರೆ ಈ ಬಾರಿ ತುಳು ಚಿತ್ರರಂಗದ ಪ್ರತಿಭಾನ್ವಿತ ಹೀರೋ, ರಾಕ್ ಸ್ಟಾರ್ ಎಂದೇ ಪರಿಚಿತ, ರೂಪೇಶ್ ಶೆಟ್ಟಿಯವರನ್ನು ಸೂರಜ್ ತಮ್ಮ ಮುಂದಿನ ಚಿತ್ರದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. ರೂಪೇಶ್ ಈಗಾಗಲೇ ಕನ್ನಡ ಸೇರಿದಂತೆ ತುಳುವಿನಲ್ಲೂ ಹಲವಾರು ಚಿತ್ರಗಳಿಗೆ ನಾಯಕರಾಗಿ ಮಿಂಚಿದ್ದಾರೆ. ಅವರನ್ನು ನಾಯಕರಾಗಿ ಸೆಲೆಕ್ಟ್ ಮಾಡಿರುವ ಸೂರಜ್ ಈ ಬಾರಿ ನಾಯಕ ಪ್ರಧಾನ ಚಿತ್ರಮಾಡುವರೇ ಎಂದು ಕಾದುನೋಡಬೇಕಿದೆ.

ದೊಂಬರಾಟದಲ್ಲಿ ನಾಯಕಿಯಾಗಿ ಮಿಂಚಿದ್ದ ಪೂಜಾ, ಅಮ್ಮೆರ್ ಪೋಲಿಸ್ ನ ನಾಯಕಿ. ಇತ್ತೀಚೆಗೆ ಚಿತ್ರದ ನಟರಿಗಾಗಿ ಮಂಗಳೂರಿನಲ್ಲಿ ಆಡಿಸನ್ ಮಾಡಿದ್ದನ್ನು ಇಲ್ಲಿ ನೆನಪಿಸಬಹುದು.

ಕಾಮೆಂಟ್‌ಗಳಿಲ್ಲ