10 ವರ್ಷ ಹಿಂದಿನ ಮಾತು, ಅಂದು ಮಾಧ್ಯಮದಲ್ಲಿ, 'ಮುಂಗಾರು ಮಳೆ' ಎಂಬ ಮೂವಿ ರಿಲೀಸ್ ಆಗಲಿದೆ, ಏನೆಲ್ಲಾ ಕಷ್ಟ ಪಟ್ಟು ಶೂಟ್ ಮಾಡಿದ್ದಾರೆ, 1 ಕೋಟಿ ಸೆಕ್ಯೂರಿಟಿ ಡಿಪೋಸಿಟ್ ಇಟ್ಟು ಜೋಗ್ ಜಲಪಾತದಲ್ಲಿ ಶೂಟ್ ಮಾಡಲು ಕೆಮರಾ ತಂದಿದ್ದಾರೆ ಎಂದೆಲ್ಲಾ ಒದಿದ್ದಾಗ, ಆ ಚಿತ್ರ ಕನ್ನಡ ಚಿತ್ರರಂಗದ ನಕಾಶೆಯನ್ನೇ ಬದಲಿಸಿತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಚಿತ್ರ ಬಿಡುಗಡೆಯಾದಗ ಖಾಲಿ ಹೊಡೆಯುತ್ತಿದ್ದ ಚಿತ್ರ ಮಂದಿರ ೨-೩ ವಾರದಲ್ಲೇ ತುಂಬಿ ತುಳುಕುವಂತೆ ಜನರು ತುಂಬುವಂತೆ ಮೋಡಿ ಮಾಡಿದ್ದ ಗಣೇಶ್ ಮತ್ತು ಭಟ್ ಜೋಡಿ, 'ಗಾಳಿಪಟ' ಚಿತ್ರದ ನಂತರ ಮತ್ತೆ ಜೋಡಿಯಾಗಲಿಲ್ಲ.
10 ವರ್ಷದ ನಂತರ ಪರಿಸ್ಥಿತಿ ಬದಲಾಗಿದೆ, ಯೋಗರಾಜ್ ಎಷ್ಟೋ ಫ್ಲಾಪ್ ಸಿನಿಮಾ ನೀಡಿದ್ದರೂ, ಫರ್ಸ್ಟ್ ಡೇ ಚಿತ್ರಮಂದಿರ ತುಂಬಿರುತ್ತದೆ, ಗಣೇಶ್ ಚಿತ್ರದ ಸುಪರ್ ಸ್ಟಾರ್ ಗಳ ಸಾಲಿನಲ್ಲಿ ನಿಂತಿದ್ದಾರೆ. ಈ ಎರಡು ಜೋಡಿ ಮತ್ತೆ ಒಂದಾಗಿದೆ. ಅಂದು ಮುಂಗಾರು ಮಳೆ, ಇಂದು ಮುಗುಳು ನಗೆ.
ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ಅಶಿಕಾ ರಂಗನಾಥ್, ನಿಕಿತಾ ನಾರಾಯಣ, ಅಪೂರ್ವ ಅರೋರಾ, ಅನಂತ್ ನಾಗ್, ಜಗಗೇಶ್ ನಟಿಸಿರುವ ಯೋಗರಾಜ್ ಭಟ್ ಬರೆದು ಮತ್ತು ನಿರ್ದೇಶನ ಮಾಡಿರುವ 2017ರ ಸುಪರ್ ಹಿಟ್ ಚಿತ್ರ "ಮುಗುಲು ನಗೆ" ಯ ಹೊಸ ಟ್ರೈಲರ್. ಸಂಗೀತ ನಿರ್ದೇಶಕ ವಿ ಹರಿಕೃಷ್ಣ, ಗಾಳಿಪಟದ ನಂತರ ಭಟ್ಟರ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮುಗುಲು ನಗೆಯನ್ನು ಸಯದ್ ಸಲಾಮ್ ಅವರು ಎಸ್ ಎಸ್ ಫಿಲ್ಮ್ಸ್ನ ಬ್ಯಾನರ್ನಡಿಯಲ್ಲಿ ನಿರ್ಮಿಸಿದ್ದಾರೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
Tags:
Entertainment