ಶಾಕಿಂಗ್ ನ್ಯೂಸ್ - ವಿಡಿಯೋ ಗೇಮ್ ಕೊಡಿಸದಕ್ಕೆ ಯುವಕನ ಆತ್ಮಹತ್ಯೆ

og:image
ಹೈದರ್ಬಾದ್ ಃ ವೀಡಿಯೋ ಗೇಮ್ ಖರೀದಿಸಲು ನಿರಾಕರಿಸಿದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ಹೇಳಿದರು.

ಸೋಮವಾರ ರಾತ್ರಿ ಹೈದರಾಬಾದ್ನ ಹೊರವಲಯದಲ್ಲಿರುವ ರಂಗ ರೆಡ್ಡಿ ಜಿಲ್ಲೆಯ ಕುಂಟ್ಲೂರ್ನಲ್ಲಿರುವ ತನ್ನ ಎರಡು ಅಂತಸ್ತಿನ ಮನೆಯ ಮೇಲ್ಛಾವಣಿಯಿಂದ ಜಿ. ಅಭಿನಯ್  (17) ಎಂಬ ಯುವಕ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ತೀವ್ರತರವಾದ ಗಾಯಗೊಂಡ ಯುವಕ ನನ್ನು  ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಯಾವುದೇ ಫಲನೀಡಲಿಲ್ಲ.

ಬಿ.ಟೆಕ್ ನ ಮೊದಲ ವರ್ಷದ ವಿದ್ಯಾರ್ಥಿ ಅಭಿನಯ್, ತಂದೆ ಜಿ. ಶ್ರೀನಿವಾಸ್ ಅವರನ್ನು ಕಳೆದ ವಾರ  3,000 ರೂಪಾಯಿ ಮೌಲ್ಯದ ವಿಡಿಯೋ ಗೇಮ್ ಖರೀದಿಸಲು ಕೇಳಿಕೊಂಡಿದ್ದರು. ಆದರೆ ತಂದೆ ನಿರಾಕರಿಸಿದರು ಮತ್ತು ಅಧ್ಯಯನದ ಮೇಲೆ ಗಮನ ಕೇಂದ್ರೀಕರಿಸಲು ಸಲಹೆ ನೀಡಿದರು. ಅಸಮಾಧಾನಗೊಂಡ ಯುವಕ ಮಾಡಿಕೊಂಡಿದ್ದಾರೆ.
ನವೀನ ಹಳೆಯದು