ಹೆಂಡತಿಯನ್ನು ಪರೀಕ್ಷಿಸಲು ಹೇಳದೇ ಮನೆಗೆ ಬಂದ ಗಂಡ - ಕಿಟಕಿಯಿಂದ ಹಾರಿದ ಪ್ರಿಯಕರ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image

ದುಬೈ ಃ ಗಂಡನಿಗೆ ತನ್ನ ಹೆಂಡತಿ ತನಗೆ ಅರಿವಿಲ್ಲದೇ ತನ್ನ ಸ್ನೇಹಿತನೊಂದಿಗೆ ಸಂಭಂದ ಇಟ್ಕೊಂಡಿದಾನೆ ಎಂದು ದೌಟು. ಆದರೆ ಪರೀಕ್ಷೆಮಾಡುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದ.

ಸಿರಿಯಾ ಮೂಲದ ಗಂಡ ದುಬೈನಲ್ಲಿ ಕುಕ್ ಆಗಿ ಕೆಲಸಮಾಡುತ್ತಿದ್ದ , ಜೋರ್ಡಾನ್ ಮೂಲದ 21 ವರ್ಷದ ಹುಡುಗಿಯನ್ನು ಮದುವೆಯಾಗಿದ್ದು, ದುಬೈನ ಪ್ಲಾಟ್ ನಲ್ಲಿ ನೆಲೆಸಿದ್ದರು. ಇತ್ತೀಚೆಗೆ ಗಂಡನ ಹಳೆಯ ಸ್ನೇಹಿತ ಸಿರಿಯಾದಿಂದ ದುಬೈಗೆ ಬಂದಾಗ ಸಹಜವಾಗಿ ಖುಷಿಯಾಗಿದ್ದ. ಗಂಡ ತನ್ನ ಸ್ನೇಹಿತನನ್ನು  ತನ್ನ ಹೆಂಡತಿಗೆ ಪರಿಚಯಿಸಿದ್ದನು. ಗೆಳೆಯ ಕೂಡಾ ಗಂಡ ಹೆಂಡತಿ ನೆಲೆಸಿದ್ದ ಬಿಲ್ಡಿಂಗ್ ನಲ್ಲಿ ಪ್ಲಾಟ್ ಪಡೆದು ವಾಸವಾಗಿದ್ದರು. ಹಾಗೆ ಗೆಳೆಯನನ್ನು ಪರಿಚಯಿಸಿದ್ದ ಕೆಲವೇ ತಿಂಗಳಲ್ಲಿ ಹೆಂಡತಿ ಗಂಡನಲ್ಲಿ ತನಗೆ ಡೈವರ್ಸ್ ಬೇಕು ಅಂದಿದ್ದಾಳೆ. ಹೆಂಡತಿಯ ಈ ತೀರ್ಮಾನಕ್ಕೆ ತನ್ನ ಸ್ನೇಹಿತನೇ ಕಾರಣ ಎಂದು ಗಂಡನಿಗೆ ಅಂದೇ ಸಂಶಯ ಬಂದಿತ್ತು.

ಅವತ್ತು ರಾತ್ರಿ ಗಂಡ ಕೆಲಸಕ್ಕೆ ಹೋದ ಮೇಲೆ ಹೆಂಡತಿಗೆ ಕಾಲ್ ಮಾಡಿ ಎಲ್ಲಿದ್ದೀಯ ಎಂದು ಕೇಳಿದ್ದಾನೆ, ಆಕೆ ತಾನು ಹೊರಗಡೆ ಹೋಗಿದ್ದೇನೆ ಎಂದಾಗ ಅದನ್ನು ನಂಬದ ಗಂಡ ಅವಳಲ್ಲಿ ಸೆಲ್ಪಿ ಕಳುಹಿಸಲು ಹೇಳಿದ್ದಾನೆ. ಆಗ ಸೆಲ್ಫಿ ಕಳುಹಿಸಲು ನಿರಾಕರಿಸಿದ ಹೆಂಡತಿಯ ಮೇಲೆ ಸಂಶಯ ಬಲಗೊಂಡು ಆತ ಎನೂ ಮಾತಡದೆ ಫೋನ್ ಕಟ್ ಮಾಡಿ ನೇರವಾಗಿ ಮನೆಗೆ ಬಂದಿದ್ದಾನೆ. ಮನೆಗೆ ಬಂದು ಕಾಲಿಂಗ್ ಬೆಲ್ ಪ್ರೆಸ್ ಮಾಡಿದರೆ, ಹೆಂಡತಿ ತುಂಬಾ ಹೊತ್ತಾಗಿ ಬಾಗಿಲು ತೆಗೆಯುತ್ತಾಳೆ. ಕೋಪದಿಂದ ಗಂಡ ಮನೆಯಲ್ಲಿ ಪರಿಶೀಲಿಸಿದಾಗ ಯಾರು ಇರಲಿಲ್ಲ, ಇದರಿಂದ ಗಂಡ ಹೆಂಡತಿ ನಡುವೆ ಮಾತಿನ ಚಕಮಕಿ ನಡೆದಿತ್ತು. ವಿನಾಕಾರಣ ಹೆಂಡತಿಯ ಮೇಲೆ ಸಂಶಯ ಮಾಡಿದಕ್ಕೆ ಬೇಸರಿಸಿ ಗಂಡ ಕೆಲಸಕ್ಕೆ ವಾಪಸ್ಸ್ ಹೋಗುತ್ತಾನೆ.

ಆದರೆ, ಕೆಲಸಕ್ಕೆ ಹೋದ ಮರುಘಳಿಗೆ ಹೆಂಡತಿ ಗಂಡನಿಗೆ ಕಾಲ್ ಮಾಡಿ, ಮನೆಗೆ ಬರುವಂತೆ ಸೂಚಿಸಿದ್ದಾಳೆ. ಮನೆಗೆ ಗಂಡ ಬಂದಾಗ ಅಚ್ಚರಿ ಕಾಡಿತ್ತು. ಮನೆ ತುಂಬಾ ಪೋಲಿಸರು ನೆರೆದಿದ್ದು, ಹೆಂಡತಿಯನ್ನು ವಿಚಾರಿಸುತ್ತಿದ್ದರು. ಅಮೇಲೆ ಪೋಲಿಸರು ನಡೆದ ನಿಜ ವಿಷಯ ತಿಳಿಸಿದ್ದಾರೆ. ವಾಸ್ತವವಾಗಿ ಗಂಡ ಹೆಂಡತಿಯನ್ನು ಪರೀಕ್ಷಿಸಲು ಮನೆಗೆ ಬಂದಿದ್ದಾಗ ಸ್ನೇಹಿತ ಮನೇಲೆ ಇದ್ದ. ಅದೇ ಕಾರಣಕ್ಕೆ ಹೆಂಡತಿ ಬಾಗಿಲು ತೆಗೆಯಲು ಲೇಟಾಗಿತ್ತು. ಕಾಲಿಂಗ್ ಬೆಲ್ ಶಭ್ದಕ್ಕೆ ಬಾಗಿಲ ಸಂಧಿಯಲ್ಲಿ ಇಣುಕಿನೋಡಿದಾಗ  ತನ್ನ ಗಂಡನನ್ನು ಕಂಡ ಹೆಂಡತಿ ಗೆಳೆಯನನ್ನು ಹೇಗಾದರೂ ಹೊರಗೆ ಹೋಗು ಎಂದು ಹೇಳಿದ್ದಾಳೆ. ಆಮೇಲೆ ಗಂಡನಿಗಾಗಿ ಬಾಗಿಲು ತೆರೆದಿದ್ದಳು. ಆ ಸಮಯದಲ್ಲಿ ಬೇರೆ ದಾರಿ ಕಾಣದೆ ಗೆಳೆಯ ಕಿಟಕಿಯ ಮೂಲಕ ಹೊರಗೆ ಹಾರಿದ್ದ. ಮೇಲಿಂದ ಹಾರಿದ ಕಾರಣ ಕಾಲು ಮುರಿದು ಬಿದ್ದಿದ್ದ ಯುವಕನನ್ನು ಕಂಡು ಪೋಲಿಸರಿಗೆ ಕರೆಹೋಗಿದೆ. ಪೋಲಿಸರು ವಿಷಯ ತಿಳಿದು, ಕೇಸ್ ದಾಖಲಿಸಿದ್ದಾರೆ.

ಪೋಲಿಸರ ಮುಂದೆ ತಪ್ಪು ಒಪ್ಪಿಕೊಂಡ ಇಬ್ಬರೂ "ತಾವು ಕುಡಿದ ಮತ್ತಲ್ಲಿದ್ದೆ, ಗಂಡನಿಗೆ ಮೋಸ ಮಾಡಿದ್ದು ನಿಜ" ಎಂದು ಒಪ್ಪಿದ್ದಾರೆ. ವಿವಾಹೇತರ ಸಂಭಂದ ದುಬೈಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.