ನನಗೆ ಅಮಿತ್ ಷಾ ಗಿಂತ ನರೇಂದ್ರ ಮೋದಿ ಇಷ್ಟ" ಮಮತಾ ಬ್ಯಾನರ್ಜಿ

og:image
ಕೊಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಷ್ಟು ದಿನ ನರೇಂದ್ರ ಮೋದಿ ವಿರುದ್ಧ ಕತ್ತಿಮಸೆಯುತ್ತಿದ್ದರು, ಆದರೆ ಇಂದು ತಮ್ಮ ಗುರಿ ಬದಲಾಯಿಸಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ರನ್ನು ಗುರಿಯಾಗಿಸಿ ಧಾಳಿ ಮಾಡಿದರು. ಇಷ್ಟು ದಿನ ಪ್ರಧಾನಿ ಮೋದಿ ವಿರುದ್ಧ ಜಿ.ಎಸ್.ಟಿ ಬಗ್ಗೆ ವಾದ ಮಾಡುತ್ತಿದ್ದ ಮಮತಾ, ಈಗ ತಮ್ಮ ಗುರಿ ಬದಲಿಸಿ ಅಮಿತ್ ಷಾ ಮೇಲೆ ಧಾಳಿ ಮಾಡಿದರು.

"ನಾನು ನರೇಂದ್ರ ಮೋದಿಯವರನ್ನು ಇಷ್ಟಪಡುತ್ತೇನೆ, ಅಮಿತ್ ಷಾರನ್ನು ಮಾತ್ರ ಇಷ್ಟ ಪಡಲ್ಲ, ನಾನು ಪ್ರಧಾನಮಂತ್ರಿಯನ್ನು ದೂಷಿಸುವುದಿಲ್ಲ, ನಾನು ಯಾಕೆ ಅವರನ್ನು ದೂಷಿಸಬೇಕು? ಅವರ ಪಕ್ಷ ಅದನ್ನು ನೋಡಿಕೊಳ್ಳಬೇಕು" ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಟಿವಿ ಚಾನೆಲ್ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಸರ್ಕಾರದ ವ್ಯವಹಾರಗಳಲ್ಲಿ ಪಕ್ಷದ ಅಧ್ಯಕ್ಷರು ಮಧ್ಯಸ್ಥಿಕೆ ವಹಿಸುತ್ತಿರುವುದು ಒಂದು ರೀತಿಯ ಸರ್ವಾಧಿಕಾರವಾಗಿದೆ ಎಂದು ಅಮಿತ್ ಷಾ ಬಗ್ಗೆ ಹೇಳಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಬಗ್ಗೆ ಬಂಗಾಳ ಮುಖ್ಯಮಂತ್ರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಅವರು ಬಿಜೆಪಿ ವ್ಯಕ್ತಿಯಾಗಿದ್ದಾರೆ, ಆದರೆ ಅವರು ಸಮತೋಲನ ಮತ್ತು ನಿಷ್ಪಕ್ಷಪಾತವಾಗಿದ್ದರು, ನಾವು ಅವರ ಅಡಿಯಲ್ಲಿ ಕೆಲಸ ಮಾಡಿದ್ದೇವೆ ಮತ್ತು ಯಾವುದೇ ಸಮಸ್ಯೆ ಎದುರಿಸಲಿಲ್ಲ" ಎಂದು ಮಮತಾ ಹೇಳಿದರು. "ಆದರೆ ಇಂದು ಯಾಕೆ ನಾವು ಸಮಸ್ಯೆಗಳನ್ನು ಎದುರಿಸುತ್ತಿರುವೆವು? ನಾನು ಪ್ರಧಾನಿ ಅವರನ್ನು ದೂಷಿಸಲು ಬಯಸುವುದಿಲ್ಲ ಅವರ ಪಕ್ಷವು ಅವರ ಬಗ್ಗೆ ಯೋಚಿಸಬೇಕು, ಆದರೆ ಅವರ ಪಕ್ಷ ಉಳಿದ ಎಲ್ಲಾ ಪಕ್ಷಗಳಿಗೆ ಯಾಕೆ ಸಮಸ್ಯೆಗಳನ್ನು ಸೃಷ್ಟಿಸುವುದು?" ಮುಖ್ಯಮಂತ್ರಿ ಹೇಳಿದರು.

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಅಧ್ಬುತವಾಗಿ ಪ್ರದರ್ಶನ ನೀಡಿದ್ದು, ಅಮಿತ್ ಶಾ ತಮ್ಮ ಚಾಣಕ್ಯ ನಡೆಯಿಂದ ಹೋದಲ್ಲೆಲ್ಲಾ ಜಯಭೇರಿ ಭಾರಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕಿದೆ.

English Summary: Mamatha Banerejee says she likes Narendra modi over Amith Shah
Tags :
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ