'ಮಧ್ಯವರ್ತಿಗಳು' ನನ್ನ ಸರ್ಕಾರದ ಬಗ್ಗೆ ಅತೃಪ್ತಿ ಹೊಂದಿದ್ದಾರೆ: ಪ್ರಧಾನಿ ಮೋದಿ

og:image
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದಲ್ಲಿ ಭ್ರಷ್ಟಾಚಾರವನ್ನು ಸಿಸ್ಟಮ್ ನ ಒಂದು ಸಾಮನ್ಯ ಆಚರಣೆ ತರಹ ಒಪ್ಪಿಕೊಂಡಿರುವುದರ ಕುರಿತು ತನ್ನ "ಅತೃಪ್ತಿ" ಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

'ಚೇಂಪಿಯನ್ಸ್ ಆಫ್ ಚೇಂಜ್' ಕಾರ್ಯಕ್ರಮದಲ್ಲಿ 200 ಕ್ಕೂ ಅಧಿಕ ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರದಲ್ಲಿ ಸಮೂಹ III ಮತ್ತು IV ಉದ್ಯೋಗಿಗಳಿಗೆ ಇಂಟರ್ವ್ಯೂಗಳ ಈಗಾಗಲೇ ಮುಗಿಸಿದೆ ಎಂದು ತಿಳಿಸಿದರು. ಇದರಿಂದಾಗಿ ಮಧ್ಯವರ್ತಿಗಳ ಪಾತ್ರವನ್ನು ಕೊನೆಗೊಳಿಸಲಾಗುವುದು, ಹಣ ನೀಡಿದರೆ ಕೆಲಸಮಾಡಿಕೊಡುವ ಮಧ್ಯವರ್ತಿಗಳಿಗೆ ಇನ್ನು ಉಳಿಗಾಲವಿಲ್ಲ ಎಂದರು.

"ಭ್ರಷ್ಟಾಚಾರವು ಸಾಂಸ್ಥಿಕವಾಗಿದ್ದು ( institutionalised) ದುರದೃಷ್ಟಕರವಾಗಿದ್ದು, ನೀವು ಅದರ ವಿರುದ್ಧ ಸಾಂಸ್ಥಿಕ ವ್ಯವಸ್ಥೆಯನ್ನು (counter institutional) ರೂಪಿಸುವವರೆಗೆ, ಅದು ನಿಲ್ಲೊದಿಲ್ಲ." ಎಂದು ನಿತಿ ಆಯೋಗ್ (Niti Aayog.) ಸಂಘಟಿಸಿದ ಕಾರ್ಯಕ್ರಮದಲ್ಲಿ ಮೋದಿ ಹೇಳಿದರು.

ಮಧ್ಯವರ್ತಿಗಳಿಗೆ ಈಗ ಕೆಲಸ ಸಿಗುತ್ತಿಲ್ಲ ಮತ್ತು ಅವರೇ ನಿರುದ್ಯೋಗ ಹೆಚ್ಚಾಗಿದೆ ಎಂದು ಕೂಗಾಡುತ್ತಿದ್ದಾರೆ ಎಂದು ಮೋದಿ ಹೇಳಿದರು.

ದಿನಗಳಲ್ಲಿ ಎರಡು ಬಾರಿ ಉದ್ಯಮಿಗಳನ್ನು ಭೇಟಿ ಮಾಡಿದ ಮೋದಿ, "ಕೇವಲ ಸರ್ಕಾರಗಳು ಮತ್ತು ಅದರ ಕ್ರಮಗಳಿಂದ ಹೊಸ ಭಾರತವನ್ನು ನಿರ್ಮಿಸಲಾಗುವುದಿಲ್ಲ, ಭಾರತದ ಪ್ರತಿಯೊಬ್ಬ ನಾಗರಿಕರಿಂದ ಚೇಂಜ್ ನಡೆಯಬೇಕಾಗಿದೆ" ಎಂದು ಹೇಳಿದರು.
English Summary: Modi warns about Middleman in business, Ends the system, stresses need of change in system.
Tags : Modi, NITI ayog, Meeting, middleman
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ