"ನೀವೇನು ದೇವರಿಗಿಂತ ಮೇಲಲ್ಲ" ಶ್ರೀಶಾಂತ್ ಬಿಸಿಸಿಐ ಮೇಲೆ ಕೆಂಡ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image

ನವದೆಹಲಿ (ಪಿಟಿಐ): ವೇಗದ ಬೌಲರ್ ಶ್ರೀಶಾಂತ್ ಬಿಸಿಸಿಐ ಮೇಲೆ ತಮ್ಮ ಕೋಪವನ್ನು ಟ್ವಿಟ್ಟರ್ ಮೂಲಕ ತೋರ್ಪಡಿಸಿದ್ದಾರೆ. " ಬಿಸಿಸಿಐ, ನಾನು ನಿಮ್ಮಲ್ಲಿ ಭಿಕ್ಷೆ ಬೇಡಿಕೊಳ್ಳುತ್ತಿಲ್ಲ, ನನ್ನ ಜೀವನೋಪಾಯವನ್ನು ಮರಳಿ ನೀಡಲು ಕೇಳುತ್ತಿದ್ದೇನೆ." ಅದು ನನ್ನ ಹಕ್ಕು. ನೀವೇನು ದೇವರಿಗಿಂತ ಮೇಲಲ್ಲ, ನಾನು ಮತ್ತೆ ಆಡೇ ಆಡುತ್ತೇನೆ" ಎಂದು ಕೋಪಗೊಂಡ ಶ್ರೀಶಾಂತ್ ಅವರ ಟ್ವಿಟ್ಟರ್ ಪುಟದಲ್ಲಿ ಬರೆದಿದ್ದಾರೆ. ನಿಷೇಧ ಬಿಸಿಸಿಐ ನಿರ್ಧರಿಸಿದ ಹೊರತಾಗಿಯೂ ಅವರು ಸ್ಪರ್ಧಾತ್ಮಕ ಪುನರಾಗಮನವನ್ನು ಘೋಷಿಸಿದ್ದಾರೆ.

ಗುರುವಾರ, ಬಿಸಿಸಿಐ ಶ್ರೀಶಾಂತ್ ಮೇಲೆ ಹೇರಿದ್ದ ನಿಷೇಧ ತೆರವುಗೊಳಿಸಬೇಕೆಂದು ಕೇರಳ ಹೈಕೋರ್ಟ್ನ ಮಾಡಿದ್ದ ಆರ್ಡರನ್ನು ಡಿವಿಜನ್ ಬೆಂಚ್ ನಲ್ಲಿ ಪ್ರಶ್ನಿಸಲು ನಿರ್ಧರಿಸಿದೆ. ಇದರಿಂದ ಕುಪಿತಗೊಂಡ ಶ್ರೀಶಾಂತ್ ಟ್ವಿಟ್ಟರ್ ನ ಮೊರೆ ಹೋಗಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ ಶ್ರೀಶಾಂತ್,"ನಾನು ನನ್ನ ಮುಗ್ಧತೆಯನ್ನು ಸಾಬೀತುಮಾಡಿದ್ದೇನೆ, ಆದರೂ ಪುನಹ ಪುನಹ ನೀವು ನನ್ನ ಮೇಲೆ ಯಾಕೆ ಈ ತರ ಕೆಡುಕನ್ನು ಬಯಸುತ್ತಿದ್ದೀರ??" ಎಂದು ಕೇಳಿಕೊಂಡಿದ್ದಾರೆ.