ಇದೇನಾ ಸ್ವಾತಂತ್ರ್ಯ ?? ಸ್ವತಂತ್ರ ದಿನದಂದೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ -ಶಾಕಿಂಗ್ ನ್ಯೂಸ್

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image

ಚಂಡೀಗಢ: ಮಂಗಳವಾರ ಚಂಡೀಗಢದ ಶಾಲೆಯೊಂದರಲ್ಲಿ, ಸ್ವತಂತ್ರ ದಿನಾಚರಣೆ ಆಚರಿಸಿ ಮನೆಗೆ ಹಿಂತಿರುಗಿತ್ತಿದ್ದ ಹದಿಹರೆಯದ ಹುಡುಗಿಯೊಬ್ಬಳ ಮೇಲೆ ದುಷ್ಕರ್ಮಿಗಳಿಂದ ಅತ್ಯಾಚಾರ ಎಸಗಲಾಗಿದೆ. ವಿದ್ಯಾರ್ಥಿಗೆ ೧೨ ವರ್ಷವಾಗಿದ್ದು, ಎಂಟನೇ ಕ್ಲಾಸಿನ ವಿಧ್ಯಾರ್ಥಿಯಾಗಿದ್ದಳು.

ಕ್ಲಾಸ್ 8 ವಿದ್ಯಾರ್ಥಿಯು, ಶಾಲೆಯಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿ ಬಳಿಕ ವಾಪಸಾಗುತ್ತಿದ್ದಾಗ, ಅವಳನ್ನು ಚಂಡೀಗಢದ ಸೆಕ್ಟರ್ 23 ರಲ್ಲಿ ಮಕ್ಕಳ ಉದ್ಯಾನವನಕ್ಕೆ ಎಳೆದುಕೊಂಡು ಹೋಗಿ, ಶಂಕಿತರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ, ಹುಡುಗಿ ಮನೆಗೆ ಬಂದಾಗ ಅಪರಾಧದ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದು, ಅವರು ಪೊಲೀಸರನ್ನು ಕರೆದು ಕೇಸು ದಾಖಲಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಗಾಗಿ ಹುಡುಗಿಯನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೊಲೀಸರು ಅಪಹರಣ, ತಪ್ಪು ನಡವಳಿಕೆ ಮತ್ತು ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ.

English Summary:Girl raped in Chandigarh, Police registered case, Raped on Independence day shocking news
Tags : rape, independence day, girl, school
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.