2019 ವರ್ಲ್ಡ್-ಕಪ್ ತಂಡದಿಂದ ಯುವರಾಜ್ ಸಿಂಗ್ ಹೊರಗೆ - ಫಾರ್ಮ್ ನೋಡ್ಬೇಡಿ - ಫಿಟ್ನೆಸ್ ನೋಡಿ!

og:image
ನವದೆಹಲಿ: ಭಾರತೀಯ ಕ್ರಿಕೆಟ್ ಲೋಕದ 'ಫೈಟರ್ ಮ್ಯಾನ್' ಯುವರಾಜ್ ಸಿಂಗ್ ಅವರು ಇನ್ನು ಮುಂದೆ ನೀಲಿ ಜರ್ಸಿಯಲ್ಲಿ ಮತ್ತೆ ಕಾಣಿಸುವುದಿಲ್ಲ, ಕಳೆದ 17 ವರ್ಷಗಳಲ್ಲಿ ಅವರು ದೇಶಕ್ಕಾಗಿ ಆಡಿದ್ದು, ಉತ್ತಮ್ಮ ಪ್ರದರ್ಶನ ನೀಡುತ್ತಿದ್ದರು.

ಭಾನುವಾರ ರಾಷ್ಟ್ರೀಯ ಆಯ್ಕೆಗಾರರು ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಸರಣಿಗೆ ತಂಡ ಸೆಲೆಕ್ಟ್ ಮಾಡುವಾಗ ಯುವರಾಜ್ ಸಿಂಗ್ ಅವರನ್ನು ಹೆಸರಿಸಲಿಲ್ಲ, ಇದೊಂದು ಕಠಿಣ ಆದರೆ ನ್ಯಾಯೋಚಿತ ನಿರ್ಣಯವಾಗಿದ್ದು, ಇಂಗ್ಲೆಂಡಿನಲ್ಲಿ 2019 ರ ವಿಶ್ವಕಪ್-ಗೆ ತಂಡ ಕಟ್ಟಲು ಆಯ್ಕೆಗಾರರು ಈಗಾಗಲೇ ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗಿದೆ.

ತಜ್ಞರ ಅಭಿಪ್ರಾಯಗಳ ಪ್ರಕಾರ, ಪ್ರಾಯಶಃ ಇದು ಯುವರಾಜ್ ಸಿಂಗ್ ರ ನಿರ್ಗಮನದ ಸಮಯ.

 ಫಾರ್ಮ್ ನೋಡ್ಬೇಡಿ - ಫಿಟ್ನೆಸ್ ನೋಡಿ!
"ಯುವಿ ಒಬ್ಬ ಹೋರಾಟಗಾರ, ಆದರೆ 2019 ವಿಶ್ವಕಪ್ ಬಗ್ಗೆ ಯೋಚಿಸಿದರೆ, ಕೇವಲ ಫಾರ್ಮ್ಗಿಂತ ಹೆಚ್ಚಾಗಿ ಅವರ ಫಿಟ್ನೆಸ್ ಬಗ್ಗೆ ನಾವು ಗಮನ ಹರಿಸಬೇಕು. 20-20 ಫಿಟ್ನೆಸ್ ಮತ್ತು 50-ಓವರ್ ಫಿಟ್ನೆಸ್ ನಡುವಿನ ವ್ಯತ್ಯಾಸವಿದೆ" ಸಬಾ ಕರೀಮ್, ರಾಷ್ಟ್ರೀಯ ಸೆಲೆಕ್ಟರ್ ಇಂದು ಪಿಟಿಐಗೆ ತಿಳಿಸಿದ್ದಾರೆ.

"2015 ರಲ್ಲಿ ಆಸ್ಟ್ರೇಲಿಯಾ ಟ್ವೆಂಟಿ -20 ಯಲ್ಲಿ ಯುವರಾಜ್ ಅವರನ್ನು ಮರಳಿ ತಂಡಕ್ಕೆ ಪಡೆದುಕೊಂಡ ನಮ್ಮ ಅಧಿಕಾರಿಗಳ ತಂಡವು, ಭಾರತದಲ್ಲಿ ವಿಶ್ವ ಟ್ವೆಂಟಿ 20 ಮತ್ತು ಯುವರಾಜ್ ಅನುಭವವನ್ನು ಮಾತ್ರ ನೋಡಿದ್ದೆವು, ಆದರೆ ಈಗ ವಿಭಿನ್ನವಾಗಿದೆ. ಈಗ ನಾವು ಮನೀಷ್ ಪಾಂಡೆ ಅತ್ಯುತ್ತಮ ಪ್ರತಿಭೆಯಾಗಿದ್ದು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಬೇಕು "ಎಂದು ಭಾರತದ ಮಾಜಿ ಸ್ಟಂಪರ್ ಹೇಳಿದರು.

"ನಾವು ಈಗ ವಿಶ್ವ ಕಪ್ ಗೆ ಒಂದೂವರೆ ವರ್ಷಗಳಿಗಿಂತ ಕಡಿಮೆ ಸಮಯವನ್ನು ಹೊಂದಿದ್ದೇವೆ, ಕೋರ್ ತಂಡವು ಕನಿಷ್ಟ 40 ಪಂದ್ಯಗಳನ್ನು ಆಡಬೇಕಿದೆ ಮತ್ತು ಭಾರತ ಎ ತಂಡದ ನಾಯಕನಾಗಿದ್ದ ಮನೀಷ್ ಅವರು ಉತ್ತಮವಾದ ಸಾಧನೆ ಮಾಡಿದ್ದಾರೆ ಮತ್ತು ಅವರು ಪ್ರಸ್ತುತ ಭಾರತೀಯ ಸಾಲಿನಲ್ಲಿ ಅತ್ಯುತ್ತಮ ಕ್ಷೇತ್ರರಕ್ಷಕರಾಗಿದ್ದಾರೆ" ಎಂದು ಕರೀಮ್ ತಮ್ಮ ಅಭಿಪ್ರಾಯ ತಿಳಿಸಿದರು.

Tags : Yuvraj Singh, Cricket, Not part of 2019, World Cup, Not selected. Cricket News, Sports News NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ