ವಿಮಾನದಲ್ಲಿ ಮದುವೆಯಾದ ಈ ಜೋಡಿ - ಎಲ್ಲಿ? ಹೇಗೆ ಗೊತ್ತಾ?

og:image

ರಾಕೇಶ್ ಮತ್ತು ದಕ್ಷಿಣಾ  ಇಬ್ಬರೂ ಮಧುರೈ ನಿವಾಸಿಗಳಾಗಿದ್ದು, ತಮಿಳುನಾಡಿನಲ್ಲಿ ನಡೆಯುತ್ತಿರುವ COVID-19 ವಿವಾಹ ನಿರ್ಬಂಧಗಳು ಮತ್ತು ಕರ್ಫ್ಯೂ ತಪ್ಪಿಸುವ ಉದ್ದೇಶದಿಂದ ವಿಮಾನವನ್ನು ಎರಡು ಗಂಟೆಗಳ ಕಾಲ ಬಾಡಿಗೆ ಪಡೆದು ಆಕಾಶದಲ್ಲಿ ಮದುವೆಯಾದ ದಂಪತಿಗಳು. 

"ಮಧುರೈನ ರಾಕೇಶ್-ದಕ್ಷಿಣಾ, ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆಗೆ ಪಡೆದು ಆಕಾಶದಲ್ಲಿ ವಿವಾಹವಾದರು" ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ನಂತರ ಸಮಾರಂಭದ ವಿಡಿಯೋ ಕೂಡ ಈಗ ವೈರಲ್ ಆಗುತ್ತಿದೆ. 


ಟ್ವಿಟ್ಟರ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಮದುವೆ ಹಾಜರಿದ್ದ ಸಂಬಂಧಿಕರ ಚಪ್ಪಾಳೆಯ ನಡುವೆ, ವರ ವಧುವಿನ ಕುತ್ತಿಗೆಗೆ ಮಂಗಳಸೂತ್ರವನ್ನು ಕಟ್ಟಿದ್ದಾನೆ. ಎಲ್ಲಾ ಸಂಬಂಧಿಕರು, ನವ ವಧುವರರನ್ನು ಹೂವಿನ ದಳಗಳನ್ನು ಎಸೆದು ಹಾರೈಸಿದ್ದಾರೆ.

ಮಧುರೈನ ಈ ದಂಪತಿಗಳು ಪ್ರೀತಿಯ ಸಲುವಾಗಿ ಜನರು ಏನು ಮಾಡುತ್ತಾರೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ! ಮದುವೆಯು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕಳೆಯಲು ಬಯಸುವ  ಅಮೂಲ್ಯವಾದ ಕ್ಷಣಗಳಲ್ಲಿ ಒಂದಾಗಿದೆ. 
ನವೀನ ಹಳೆಯದು