ಕೋವಿಡ್ -19 ರಿಂದ ಅನಾಥರಾದ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಕರ್ನಾಟಕ ಸರ್ಕಾರದ ಯೋಜನೆ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ಸಾಂಕ್ರಾಮಿಕ ರೋಗದಿಂದ ಅನಾಥವಾಗಿರುವ 18 ವರ್ಷ ಒಳಗಿನ ವಯಸ್ಸಿನ ಮಕ್ಕಳನ್ನು ಪುನರ್ವಸತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ವಿಶೇಷ ಮಕ್ಕಳ ಕೋವಿಡ್ -19 ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಕರ್ನಾಟಕ ಸರ್ಕಾರ ಮಂಗಳವಾರ ಪ್ರಕಟಿಸಿದೆ.

"ಕೋವಿಡ್ -19 ರ ಎರಡನೇ ಅಲೆಯಿಂದ ಅನಾಥರಾದ ಮಕ್ಕಳನ್ನು ಪುನರ್ವಸತಿ ಮಾಡಲು ಸರ್ಕಾರ ಸಿದ್ಧವಾಗಿದೆ. 18 ವರ್ಷ ವಯಸ್ಸಿನವರಿಗೆ ಪ್ರತ್ಯೇಕ ಕ್ವಾರಂಟೈನ್ ಸೆಂಟರ್ ಮತ್ತು ಹಾಸ್ಟೆಲ್‌ಗಳನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದರಿಂದ ಮಕ್ಕಳು ಭಯಪಡಬೇಕಾಗಿಲ್ಲ ”ಎಂದು ಜೊಲ್ಲೆ ದೃ್ಡಪಡಿಸಿದರು.

 “ಇಲಾಖೆಯಿಂದ ಹೇಳಲ್ಪಟ್ಟ ಷರತ್ತುಗಳಲ್ಲಿ, ಕೋವಿಡ್ -19 ರ ಕಾರಣದಿಂದಾಗಿ ಇಬ್ಬರೂ ಹೆತ್ತವರ ನಿಧನ, ಇಬ್ಬರೂ ಪೋಷಕರು ಆಸ್ಪತ್ರೆಗೆ ದಾಖಲಾಗಿದ್ದರೆ, ಅವರಲ್ಲಿ ಒಬ್ಬರು (ತಂದೆ / ತಾಯಿ) ಸೋಂಕಿನಿಂದ ಸತ್ತರೆ ಅಥವಾ ಒಬ್ಬರು ತೀರಿಕೊಂಡು ಇನ್ನೊಬ್ಬರು  ಬೇರೆ ಪ್ರದೇಶದಲ್ಲಿ ಜೀವಿಸುತ್ತಿದ್ದರೆ ಅಂಥಹ ಮಕ್ಕಳಿಗೂ ಪುನರ್ವಸತಿ ಕಲ್ಪಿಸಲಾಗುವದು” ಎಂದು ಜೊಲ್ಲೆ ವಿವರಿಸಿದರು.

English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.