
ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಕೊರೊನಾ ತನ್ನ ಕೆನ್ನಾಲಿಗೆ ಚಾಚುತ್ತಾ, ಹಲವಾರು ಪ್ರಾಣಗಳನ್ನು ಬಲೆತೆಗೆದುಕೊಂಡಿದೆ. ಆಷ್ಟೇ ಅಲ್ಲದೇ ಲಾಕ್ ಡೌನ್ ಘೋಷಣೆಯಾಗಿ ಜನರು ದಿನದ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.
ಇದರ ಮಧ್ಯೆ ರೈತ ಸಂಘ ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ ಆರ್ಯರ ಅವರು ಕತ್ತಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಈಶ್ವರ ಅವರು ಪಡಿತರ ಅಕ್ಕಿ ಕಡಿತಗೊಳಿಸಿರುವುದರ ಸಂಬಂಧ ಸಚಿವರನ್ನು ಪ್ರಶ್ನಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ ಕೊಡ್ತೀವಿ. ಲಾಕ್‍ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಕತ್ತಿ ಉತ್ತರಿಸಿದ್ದಾರೆ. ಇದರಿಂದ ಸಮಾಧಾನಗೊಳ್ಳದ ಕರೆ ಮಾಡಿರುವ ವ್ಯಕ್ತಿ, ಅಲ್ಲಿಯವರೆಗೆ ಏನು ತಿನ್ನೋದು, ಸಾಯೋದ? ಎಂದು ಕೇಳಿದಕ್ಕೆ, ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಉಡಾಫೆಯ ಮಾತಾಡಿದ್ದಾರೆ. ಅಲ್ಲದೆ ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ.
ಕೊರೊನಾ ಕರಾಣದಿಂದ ಒತ್ತಡದಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳದೆ ಜನರ ಎಲ್ಲಾ ಬೇಕು ಬೇಡಗಳನ್ನು ಕೇಳುವುದು ಮಂತ್ರಿಯಾದವರ ಕರ್ತವ್ಯ, ಆದರೆ ಈತರ ಅಹಂನಿಂದ ಜನರಲ್ಲಿ ಸರ್ಕಾರದ ಮೇಲೆ ವಿಶ್ವಾಸಕಳೆದುಕೊಳ್ಳುವಂತೆ ಮಾಡಿರುವುದು ತಪ್ಪು.
Tags:
Karnataka