
ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮುಂದಿನ ಹಂತದ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್‌ನ ನೋಂದಣಿ ಇಂದು ಏಪ್ರಿಲ್ 28 ರಿಂದ ಪ್ರಾರಂಭವಾಗಲಿದೆ.
ಅರ್ಹ ನಾಗರಿಕರು ತಮ್ಮ ಸ್ಲಾಟ್‌ಗಳನ್ನು ಆನ್‌ಲೈನ್‌ನಲ್ಲಿ ಸರ್ಕಾರದ ಕೋ-ವಿನ್ ಪೋರ್ಟಲ್ ಅಥವಾ ಕಳೆದ ವರ್ಷ ಪ್ರಾರಂಭಿಸಿದ ಆರೋಗ್ಯಾ ಸೇತು ಆ್ಯಪ್ ಮೂಲಕ ಬುಕ್ ಮಾಡಲು ಸಾಧ್ಯವಾಗುತ್ತದೆ.
ಇಲ್ಲಿಯವರೆಗೆ, 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ, ಆರೋಗ್ಯ ಮತ್ತು ಮುಂಚೂಣಿ ಕೆಲಸಗಾರರಿಗೆ ಮಾತ್ರ ಲಸಿಕೆ ತೆಗೆದುಕೊಳ್ಳಲು ಅವಕಾಶವಿತ್ತು. ಮೇ 1 ರಿಂದ, ಎಲ್ಲಾ ವಯಸ್ಕ ನಾಗರಿಕರು ಕಡ್ಡಾಯವಾಗಿ ನೋಂದಣಿ ಮಾಡಿದ ನಂತರ ಲಸಿಕೆ ಪಡೆಯಲು ಸಾಧ್ಯವಾಗುತ್ತದೆ ಎಂದು ಸರ್ಕಾರ ಹೇಳಿದೆ.