
ಕುಂದಾಪುರ, ಫೆ. 27: ಆರ್ಥಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಸಂತೋಷ್ ಪೂಜಾರಿ (35) ಎಂಬವರು ಫೆ. 27ರಂದು ಬೆಳಗ್ಗೆ ಕೋಡಿ ಎಂಬಲ್ಲಿರುವ ತನ್ನ ಬಾಡಿಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮಾಸೆಬೈಲು: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಶೇಡಿಮನೆ ಗ್ರಾಮದ ಗುಡ್ಡೆಯಂಗಡಿ ನಿವಾಸಿ ಶಾಲಿನಿ (22) ಎಂಬವರು ಫೆ.27ರಂದು ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
Tags:
Coastal