
ಬೆಂಗಳೂರು : ಚಿತ್ರತಂಡಗಳು ತಮ್ಮ ಚಿತ್ರದ ಪ್ರಚಾರಕ್ಕಾಗಿ ವಿವಿದ ಟ್ರಿಕ್ಸ್ ಮಾಡುವುದು ಸಾಮಾನ್ಯ. ಒಟ್ಟಾರೆಯಾಗಿ ಪ್ರೇಕ್ಷಕರ ಮನದಲ್ಲಿ ತಮ್ಮ ಚಿತ್ರದ ಬಗ್ಗೆ ಅರಿವು ಮೂಡಿಸಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ.
ಆದರೆ, ಚಿತ್ರದ ಮೇಕಿಂಗ್ ಫೋಟೋಗಳನ್ನು ಹಾಕಿರುವ "ಮಾಯಾ ಕನ್ನಡಿ" ಚಿತ್ರ ತಂಡಕ್ಕೆ ಒಂದು ಆಶ್ವ್ಹರ್ಯ್ಯ ಕಾದಿತ್ತು. ಮೇಕಿಂಗ್ ಚಿತ್ರಗಳಲ್ಲೇ ವಿಚಿತ್ರವಾಗಿ ಮನಸೆಳೆದಿದ್ದು, ಈ ಕೆಳಗೆ ಕಾಣಿಸಿರುವ ಒಂದು ಚಿತ್ರ.
ಈ ಚಿತ್ರದಲ್ಲಿ ಚಿತ್ರದ ನಾಯಕಿ ಕಾಜಲ್ ಕುಂದರ್ ತೋಳ್ಬಲ ತೋರಿಸುತ್ತಿರುವಂತೆ ಕಾಣಿಸುತ್ತಿರುವ ಈ ಚಿತ್ರ ಜನರಲ್ಲಿ ಒಮ್ಮೆಗೆ ಕಿರುನಗೆ ಮೂಡಿಸಿದ್ದು ಸುಳ್ಳಲ್ಲ. ಚಿತ್ರವನ್ನು ಕೂಲಕುಂಷವಾಗಿ ಪರೀಕ್ಷಿಸಿದಾಗ, ಕಾಜಲ್ ಕುಂದರ್ ಹಿಂದೆ ಇನ್ನೊಬ್ಬ್ಬ ನಟ ನಿಂತಿರುವುದು ಕಾಣಿಸುತ್ತಿದೆ. ಹೌದು, ಅನೂಪ್ ಸಾಗರ್ ಎಂಬ ತುಳು ನಾಯಕ ನಟ ಕಾಜಲ್ ಕುಂದರ್ ಹಿಂದೆ ನಿಂತು ಇವರಿಬ್ಬರು ಸೇರಿ ಈ ಭ್ರಮಾತ್ಮಕ ಚಿತ್ರವನ್ನು ಕ್ಲಿಕ್ಕಿಸ್ಸಿದ್ದಾರೆ. ಅನೂಪ್ ಸಾಗರ್ ಈ ಚಿತ್ರದ ಮೂಲಕ ನೆಗೆಟೆವ್ ಪಾತ್ರದಲ್ಲಿ ಕಾಣಿಸಲಿದ್ದಾರೆ.
"ರಿಲಾಕ್ಸ್ ಸತ್ಯ" ಮತ್ತು "ಡಾಟರ್ ಆಫ್ ಪಾರ್ವತಮ್ಮ" ಚಿತ್ರದ ಮೂಲಕ ಎಲ್ಲರ ಮನಗೆದ್ದಿರುವ ಪ್ರಭು ಮುಂಡ್ಕೂರು ಈ ಚಿತ್ರದ ನಾಯಕ ನಟರಾಗಿದ್ದು ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನತ್ತ ತಮ್ಮ ಧಾಪುಗಾಲು ಇಡುತ್ತಿದ್ದಾರೆ.
ಕನ್ನಡದ ಪ್ರಖ್ಯಾತ ನಟ ಕೆ. ಎಸ್. ಶ್ರೀಧರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಂಡುಬರಲಿದ್ದಾರೆ. ಇವರು ಈಗಾಗಲೇ ಕಿರಿಕ್ ಪಾರ್ಟಿ, ಮಫ್ತಿ ಮುಂತಾದ ಚಿತ್ರಗಳಲ್ಲಿ ಕಾಣಿಸಿದ್ದು, ಚಿತ್ರರಂಗದಲ್ಲಿ ಫೋಷಕ ನಟನ ಸ್ಥಾನವನ್ನು ಸಮರ್ಥವಾಗಿ ತುಂಬುತ್ತಿದ್ದಾರೆ.
ಕಿರಿಕ್ ಪಾರ್ಟಿ ಮೂಲಕ ಗಮನಸೆಳೆದಿದ್ದ ಆಶ್ವಿನ್ ಪಲ್ಲಕ್ಕಿ, "ಗಟ್ಟಿಮೇಳ" ಧಾರವಾಹಿಯಲ್ಲಿ ನಟಿಸುತ್ತಿರುವ ಕನ್ನಡ ಹಾಗೂ ತುಳು ನಟಿ ಅನ್ವಿತ ಸಾಗರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಕಿರಿಕ್ ಪಾರ್ಟಿ ಮುಗಿಸಿದ ಅಶ್ವಿನ್, ಈಗ ಫೊಟೊಗ್ರಫರ್ ಪಾಂಡು ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಇನ್ನು ಪಟ ಪಟ ಮಾತಿನ ಪಟಾಕಿಯೆಂದೇ ಚಿರಪರಿಚಿತ ಅನ್ವಿತ ಕನ್ನಡ ಹಾಗೂ ಚಿತ್ರದಲ್ಲಿ ನಟಿಸುವ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದ್ದಾರೆ.
ರಂಗಿತರಂಗ ಚಿತ್ರದಲ್ಲಿ ರಫಿಕ್ ಎಂದೇ ಫೇಮಸ್ ಆಗಿದ್ದ ಕಾರ್ತಿಕ್ ರಾವ್ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಕಾರ್ತಿಕ್ ರಾವ್ ಈಗಾಗಲೇ ಒಪರೇಷನ್ ಅಲಮೇಲಮ್ಮದಲ್ಲೂ ನಟಿಸಿದ್ದು, ಹಲವಾರು ಕನ್ನಡ ಚಿತ್ರಗಳಲ್ಲಿ ತಮ್ಮ ಕಾಮೆಡಿ ಮೂಲಕ ನಗಿಸಿದ್ದಾರೆ.
"ಮಾಯ ಕನ್ನಡಿ" ವಿನೋದ್ ಪೂಜಾರಿ ಡೈರೆಕ್ಷನ್ ಮಾಡಿರುವ ಚಿತ್ರವಾಗಿದ್ದು, ಸಿಫೋರಿಯಾ ಪಿಕ್ಚರ್ಸ್ ಮೂಲಕ ಸಪನಾ ಪಟೀಲ್ ನಿರ್ಮಸಿದ್ದಾರೆ.
ಕಿಂಗ್ ಆಫ್ ಹಾರ್ಟ್ಸ್ ಸಂಸ್ಥೆ ಈ ಚಿತ್ರದ ಸಹನಿರ್ಮಾಪಕರಾಗಿದ್ದಾರೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ, ತುಳು ಚಿತ್ರ ನಿರ್ದೆಶಕ ರಂಜಿತ್ ಬಜ್ಪೆ ಕಾರ್ಯ ನಿರ್ವಹಿಸಿದ್ದಾರೆ.
div>