ಮಂಗಳೂರು: ನಟ ನಿರ್ದೇಶಕ ರಾಜ್ ಶೆಟ್ಟಿ ನಮಗೆಲ್ಲಾ "ಮೊಟ್ಟೆ" ಎಂದೇ ಪರಿಚಿತ. ಹಿಂದಿನ ವರ್ಷ ಚಿತ್ರರಂಗದಲ್ಲೇ ಸಣ್ಣ ಬಡ್ಜೆಟ್ ನ ಚಿತ್ರವೊಂದು ಕ್ರಾಂತಿ ಮಾಡಬಹುದು ಎಂದು ತೋರಿಸಿಕೊಟ್ಟ ಚಿತ್ರ "ಒಂದು ಮೊಟ್ಟೆಯ ಕಥೆ". ಚಿತ್ರದಲ್ಲಿ "ಮೊಟ್ಟೆ ಮೊಟ್ಟೆ " ಎಂದು ಕರೆಸಿಕೊಂಡು ಅಪಹಾಸ್ಯಕ್ಕೊಳಗಾದ ಮೊಟ್ಟೆ ಪಾತ್ರದಾರಿ ರಾಜ್ ಶೆಟ್ಟಿ ಗೆ ಇನ್ನೊಂದು ಮುಖ ಇದೆ ಎಂದು ಯಾರಿಗೂ ಗೊತ್ತಿಲ್ಲ.
ಅಂದ ಹಾಗೆ ರಾಜ್ ಶೆಟ್ಟಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಚಿತ್ರದಲ್ಲೂ ನಟಿಸುತ್ತಿದ್ದು, ಇತ್ತೀಚಿಗೆ ಪುನೀತ್ ಜೊತೆ ಆತ್ಮೀಯರಾಗಿದ್ದ ಪೋಸ್ಟ್ ಒಂದನ್ನು ತಮ್ಮ ಫೇಸ್ಭುಕ್ ನಲ್ಲಿ ಹಾಕಿದ್ದರು. ರಾಜ್ ಕುಮಾರ್ ಅವರ ಅಪ್ಪಟ್ಟ ಅಭಿಮಾನಿಯಾಗಿರುವ ರಾಜ್ ಶೆಟ್ಟಿ ಅಣ್ಣಾವ್ರ ಕುಟುಂಬಕ್ಕೆ ಹತ್ತಿರವಾಗಿರೋದು ಬರೀ ಮೊಟ್ಟೆ ಚಿತ್ರದಿಂದ ಮಾತ್ರ ಅಲ್ಲ ಎಂದು ಧೈರ್ಯವಾಗಿ ಹೇಳಬಹುದು. ಏಕೆಂದರೆ ಅವರು ಮಾಡಿರುವ ಕೆಲಸವೇ ಅಂತಹುದು.
ರಾಜ್ ಶೆಟ್ಟಿಯವರು, ಬೀದಿ ಬದಿಯಲ್ಲಿ ಒಂದು ಅನಾಥ ನಾಯಿಯನ್ನು ನೋಡಿದ್ದರು. ಆ ನಾಯಿಗೆ ಮುಖದಲ್ಲೆಲ್ಲಾ ಕಜ್ಜಿ. ನೋಡಿದವರು ಮುಖ ಸಿಂಡರಿಸಿ ಹೋದರೆ, ಅಣ್ಣಾವ್ರ ಅಭಿಮಾನಿ ರಾಜ್ ಶೆಟ್ಟಿಯವರಿಗೆ ಕರುಣೆ ಉಕ್ಕಿಹರಿಯಿತು. ಆ ಕಜ್ಜಿ ರೋಗದಿಂದ ಬಳಲುತ್ತಿದ್ದ ನಾಯಿಯನ್ನು ಮನೆಗೆ ತಂದೇ ಬಿಟ್ಟರು.
ಹಾಗೆ ಮನೆಗೆ ಬಂದ ನಾಯಿಯನ್ನು ರಾಜ್ ಮತ್ತು ಅವರ ಅಮ್ಮ ಮುದ್ಧಾಗಿ ಸಾಕಿದ್ದಾರೆ. ರೋಗದಿಂದ ಬಳಲುತ್ತಿದ್ದ ನಾಯಿ ಈಗ ಆರೋಗ್ಯದಿಂದ ಮಿಂಚುತ್ತಿದೆ. ಪ್ರಾಣಿಗಳೆದಂರೆ ಮೊದಲೇ ರಾಜ್ ಅವರಿಗೆ ಪ್ರಾಣ. ತಮ್ಮ ಪ್ರಾಣಿ ಪ್ರೀತಿಯಿಂದ ನಾಯಿಗಳ ರಕ್ಷಣೆ ಮಾಡುವ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿದೆ.
ನಾಯಿ ಈಗ ಆರೋಗ್ಯವಾಗಿದ್ದು, ಅದನ್ನು ಯಾರದರೂ ಸಾಕಲು ಮುಂದೆ ಬಂದರೆ ಅವರಿಗೆ ಕೊಡುತ್ತೇನೆ ಎಂದಿರುವ ಅವರು, ನನಗೆ ಬೇರೆ ನಾಯಿಗಳನ್ನು ರಕ್ಷಿಸಲು ಇದರಿಂದ ಅನುಕೂಲ ಆಗುತ್ತದೆ ಎಂದಿದ್ದಾರೆ.
ಇನ್ನು ಇವರ ಈ ನಾಯಿ ಪ್ರೀತಿ ಹಲವಾರು ಜನರ ಮನಸೆಳೆದಿದೆ. ಹಲವಾರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿ ರಾಜ್ ರ ಈ ಸೇವೆಯನ್ನು ಗೌರವಿಸಿದ್ದಾರೆ. ತುಳು ಚಲನ ಚಿತ್ರ ನಿರ್ದೇಶಕ ರಂಜಿತ್ ಬಜ್ಪೆ , ನಿವೇದಿತಾ ಏನ್, ಧಾರವಾಡ ಪ್ರಾಣಿ ಸಂಘದ ಮಹಿ ಪ್ರಿಯಾಂಕಾ ಇವರೆಲ್ಲಾ ಕಾಮೆಂಟ್ ಮೂಲಕ ಅಭಿನಂದಿಸಿದ್ದಾರೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ. ಅಂದ ಹಾಗೆ ರಾಜ್ ಶೆಟ್ಟಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಚಿತ್ರದಲ್ಲೂ ನಟಿಸುತ್ತಿದ್ದು, ಇತ್ತೀಚಿಗೆ ಪುನೀತ್ ಜೊತೆ ಆತ್ಮೀಯರಾಗಿದ್ದ ಪೋಸ್ಟ್ ಒಂದನ್ನು ತಮ್ಮ ಫೇಸ್ಭುಕ್ ನಲ್ಲಿ ಹಾಕಿದ್ದರು. ರಾಜ್ ಕುಮಾರ್ ಅವರ ಅಪ್ಪಟ್ಟ ಅಭಿಮಾನಿಯಾಗಿರುವ ರಾಜ್ ಶೆಟ್ಟಿ ಅಣ್ಣಾವ್ರ ಕುಟುಂಬಕ್ಕೆ ಹತ್ತಿರವಾಗಿರೋದು ಬರೀ ಮೊಟ್ಟೆ ಚಿತ್ರದಿಂದ ಮಾತ್ರ ಅಲ್ಲ ಎಂದು ಧೈರ್ಯವಾಗಿ ಹೇಳಬಹುದು. ಏಕೆಂದರೆ ಅವರು ಮಾಡಿರುವ ಕೆಲಸವೇ ಅಂತಹುದು.
ರಾಜ್ ಶೆಟ್ಟಿಯವರು, ಬೀದಿ ಬದಿಯಲ್ಲಿ ಒಂದು ಅನಾಥ ನಾಯಿಯನ್ನು ನೋಡಿದ್ದರು. ಆ ನಾಯಿಗೆ ಮುಖದಲ್ಲೆಲ್ಲಾ ಕಜ್ಜಿ. ನೋಡಿದವರು ಮುಖ ಸಿಂಡರಿಸಿ ಹೋದರೆ, ಅಣ್ಣಾವ್ರ ಅಭಿಮಾನಿ ರಾಜ್ ಶೆಟ್ಟಿಯವರಿಗೆ ಕರುಣೆ ಉಕ್ಕಿಹರಿಯಿತು. ಆ ಕಜ್ಜಿ ರೋಗದಿಂದ ಬಳಲುತ್ತಿದ್ದ ನಾಯಿಯನ್ನು ಮನೆಗೆ ತಂದೇ ಬಿಟ್ಟರು.
ಇನ್ನು ಇವರ ಈ ನಾಯಿ ಪ್ರೀತಿ ಹಲವಾರು ಜನರ ಮನಸೆಳೆದಿದೆ. ಹಲವಾರು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿ ರಾಜ್ ರ ಈ ಸೇವೆಯನ್ನು ಗೌರವಿಸಿದ್ದಾರೆ. ತುಳು ಚಲನ ಚಿತ್ರ ನಿರ್ದೇಶಕ ರಂಜಿತ್ ಬಜ್ಪೆ , ನಿವೇದಿತಾ ಏನ್, ಧಾರವಾಡ ಪ್ರಾಣಿ ಸಂಘದ ಮಹಿ ಪ್ರಿಯಾಂಕಾ ಇವರೆಲ್ಲಾ ಕಾಮೆಂಟ್ ಮೂಲಕ ಅಭಿನಂದಿಸಿದ್ದಾರೆ.
ಇನ್ನು ರಾಜ್ ಅವರ ನಾಯಿ ಪ್ರೀತಿ ಇದೆ ಮೊದಲಲ್ಲ. ಈ ಮೊದಲೂ ಹಲವಾರು ನಾಯಿಗಳನ್ನು ರಕ್ಷಿಸಿ ಅದನ್ನು ಪೋಷಿಸಿದ್ದಾರೆ. ಇಂತಹ ಹೃದಯ ವಂತ ಸೆಲೆಬ್ರಿಟಿಗಳು ಎಲ್ಲರಿಗು ಮಾದರಿಯಾಗಲಿ.