ಜಲ್ಪೈಗುರಿ, ಜ. 27: ಪಿಕ್ ಅಪ್ ವಾಹನದಲ್ಲಿ ಹಸು ಸಾಗಿಸುತ್ತಿದ್ದ ಇಬ್ಬರನ್ನು, ಗಾಡಿಯಿಂದ ಕೆಳಗೆ ಎಳೆದು ಹಾಕಿ, ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಜಲ್ಪೈಗುರಿ ಜಿಲ್ಲೆಯ ಬರೋರಿಯಾ ಗ್ರಾಮದಲ್ಲಿ ಇಬ್ಬರು, ವಾಹನದಲ್ಲಿ ಹಸುಗಳನ್ನು ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನ್ವರ್ ಹುಸೇನ್ (19) ಮತ್ತು ಹಫಿಝುಲ್ ಶೇಖ್ (19) ಎಂಬ ಇಬ್ಬರು ಜನರ ಗುಂಪಿನಿಂದ ಕೊಲ್ಲಲ್ಪಟ್ಟವರು. ಮುಂಜಾನೆ, ಈ ಇಬ್ಬರೂ ಹಸುಗಳನ್ನು ಸಾಗಿಸುತ್ತಿದ್ದಾಗೆ ಅಡ್ಡಗಟ್ಟಿದ ಜನರ ತಂಡ, ಅವರನ್ನು ಗಾಡಿಯಿಂದ ಹೊರಗೆ ಎಳೆದು ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯಲ್ಲಿ ಪಿಕ್-ಅಪ್ ವ್ಯಾನ್ ಕೂಡ ಹಾನಿಗೊಳಗಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹುಸೇನ್ ಮತ್ತು ಶೇಖ್ ಅವರನ್ನು ಧುಪ್ಪುರಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿನ ವೈದ್ಯರು ಇವರಿಬ್ಬರೂ ಮ್ರತ ಪಟ್ಟಿದ್ದಾರೆ ಎಂದು ಘೋಷಿಸಿದರು.
ಮುಂಜಾಗ್ರುತಾ ಕ್ರಮವಾಗಿ, ಈ ಪ್ರದೇಶದಲ್ಲಿ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.