ನಿರ್ದೇಶಕ ಚಳಪತಿ ಮತ್ತು ನಟ ಶ್ರೀಜನ್ ಸೇರಿ ತೆಲುಗು ನಟಿ ಮೇಲೆ ರೇಪ್ ಆರೋಪ

og:image
ವಿಜಯವಾಡಃ ನಿರ್ದೇಶಕ ಚಳಪತಿ ಮತ್ತು ನಟ ಶ್ರೀಜನ್ ಅವರು ಆಕೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದರು ಎಂದು ತೆಲುಗು ನಟಿ ಮಂಗಳವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಆಗಸ್ಟ್ 15 ರಂದು ವಿಜಯವಾಡದಲ್ಲಿ ಪೋಲೀಸ್ ಠಾಣೆಗೆ ಬಂದ ನಟಿ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ನಟಿ ಆಗ್ರಹಿಸಿದ್ದಾರೆ. ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡುತ್ತೇವೆಂದು ಚಲಪತಿ ಮತ್ತು ಶ್ರೀಜನ್ ಅವರು ಭರವಸೆ ನೀಡಿದ್ದರು. ಆಮೇಲೆ ಅವರು ಚಲನಚಿತ್ರ ಚಿತ್ರೀಕರಣಕ್ಕೆ ಹೋಗುವುದರ ನಿಮಿತ್ತ ಭೀಮವರಂಗೆ ಕರೆತಂದರು ಮತ್ತು ದಾರಿಯಲ್ಲಿ ಕಾರಿನಲ್ಲಿ ಆಕೆಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದರು ಎಂದು ಆಕೆ ಅರೋಪಿಸಿದ್ದಾಳೆ.

ದೂರು ಸಲ್ಲಿಸಿದ ಬಳಿಕ ಅವರು ಮಾಧ್ಯಮಕ್ಕೆ ಮಾತನಾಡುತ್ತಾ, "ನಾನು ಆಗಸ್ಟ್ 13 ರಂದು ಭೀಮಾವರಂನಲ್ಲಿರಬೇಕಿತ್ತು ಮತ್ತು ನಾನು ರೈಲಿನ ಮೂಲಕ ಹೈದರಾಬಾದ್ನಿಂದ ಪ್ರಯಾಣ ಮಾಡಲು ಯೋಜನೆ ಹಾಕಿದ್ದೆ, ಆದರೆ ನಿರ್ದೇಶಕ ಮತ್ತು ನಾಯಕ ನನ್ನನ್ನು ನನ್ನದೇ ಕಾರಿನಲ್ಲಿ ಬರುವಂತೆ ಒತ್ತಾಯಿಸಿದರು, ಚಲಪತಿಯವರು ಕಾರನ್ನು ಡ್ರೈವ್ ಮಾಡಿತ್ತಿದ್ದರು, ಅವರು ವಿಜಯವಾಡವನ್ನು ಹತ್ತಿರ ಬಂದಾಗ ಅವರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದರು ಮತ್ತು ನಾನು ಪ್ರತಿಭಟಿಸಿದಾಗ, ನನ್ನನ್ನು ಹಿಂಭಾಗದ ಸೀಟಿಗೆ ಎಸೆದರು." ಎಂದು ವಿವರಿಸಿದರು.

"ಚಾಲಕ ಸೀಟಿನಲ್ಲಿದ್ದ ಚಾಲಪತಿ ನನ್ನ ಕಾರನ್ನು ವೇಗವಾಗಿ ಓಡಿಸಿ ಒಂದು ಲಾರಿಗೆ ಡಿಕ್ಕಿ ಹೊಡೆದನು, ಈ ಅಪಘಾತದಲ್ಲಿ ನಾನು ಗಾಯಗೊಂಡಿದ್ದು, ನಂತರ ನಾನು ಕೆಲವು ಸ್ನೇಹಿತರಿಗೆ ನನ್ನ ಸ್ಥಳವನ್ನು ಸೂಚಿಸಿ, ತಕ್ಷಣವೇ ನನ್ನ ಸ್ನೇಹಿತರು ನನ್ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಾಯಿಸಿದರು"

ನಟಿ ಹೇಳಿಕೆ ಪ್ರಕಾರ ದೂರು ದಾಖಲಿಸದಂತೆ ಅವಳನ್ನು ಒತ್ತಾಯಿಸಿದ ಅವರಿಬ್ಬರೂ,  ಬ್ಲ್ಯಾಕ್ಮೇಲಿಂಗ್ ಕೂಡಾ ಮಾಡಿದ್ದರು. ಅವರು ಆಕೆಯ ಬಳಿ ಕ್ಷಮೆಯಾಚಿಸಿದರು, ಆದರೆ ಅವಳ  ವೃತ್ತಿಜೀವನವು ಹಾಳುಮಾಡುತ್ತೇವೆ ಎಂದು ಅವಳು ಬೆದರಿಕೆ ಹಾಕಿದರು, ದೂರಿನ ನಂತರ, ನಿರ್ದೇಶಕನನ್ನು ಬಂಧಿಸಲಾಯಿತು, ಆದರೆ ಶ್ರೀಜನ್ ತಪ್ಪಿಸಿಕೊಂಡಿದ್ದಾನೆ.

English Summary:Actress acused director and actor of Rape, Telugu actress, Vijayavada, Chalapati Shrijan, Car Accident
Tags : Car, Rape, Girl, Heroine, Movie actress, Director, Actor
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ