ಸೌದಿಯಲ್ಲಿ ಭಾರತೀಯನ ನಿಸ್ವಾರ್ಥ ಸೇವೆಗೆ ಗೌರವ - ಕಾರ್ ಗಿಫ್ಟ್

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image

ಮನಾಮ: ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರಿಗೆ, ಎರಡು ವರ್ಷಗಳ ಕಾಲ ಹಿರಿಯ ಸೌದಿ ಪ್ರಜೆಗೆ ಉಚಿತವಾಗಿ ಸೇವೆ ಸಲ್ಲಿಸಿದಕ್ಕೆ ಗೌರಾವರ್ಪಣೆಯಾಗಿ, ಸೋಮವಾರ ಒಂದು ಕಾರನ್ನು ಉಡುಗೋರೆಯಾಗಿ ನೀಡಿದರು. 

22 ವರ್ಷಗಳ ಹಿಂದೆಯೇ ಮದಿನಾದಲ್ಲಿ ಜನಿಸಿದ ಭಾರತೀಯ ವ್ಯಕ್ತಿ, ಕಳೆದ ಎರಡೂವರೆ ವರ್ಷಗಳಿಂದ ಸೌದಿ ಮಹಿಳೆಯನ್ನು ವಾರಕ್ಕೆ ಮೂರು ಬಾರಿ ಡಯಾಲಿಸಿಸ್ಗೆ ಆಸ್ಪತ್ರೆಗೆ ಕರೆದೊಯ್ಯತ್ತಿದ್ದರು ಮತ್ತು ಅವರ ಡಯಾಲಿಸಿಸ್ ಮುಗಿಯುವವರೆಗೂ ಕಾಯುತ್ತಿದ್ದರು ಮತ್ತು ಆಕೆಯನ್ನು ಅಕೆಯ ಮನೆಗೆ ತಲುಪಿಸುತ್ತಿದ್ದರು. ಆದರೆ ತಮ್ಮ ಈ ಸೇವೆಗಳಿಗೆ ಒಮ್ಮೆಯೂ ಬಿಡಿಗಾಸನ್ನೂ ಕೇಳಿಲ್ಲ. 

ಸುಲಲಿತವಾಗಿ ಸೌದಿ ಮಾತೃಭಾಷೆ ಅರಬಿಕ್ ಮಾತನಾಡುವ ಭಾರತೀಯ ವ್ಯಕ್ತಿಯ ಬಳಿ ಕಾರು ಇರಲಿಲ್ಲ ಮತ್ತು ಸೌದಿ ಮಹಿಳೆಯ ಸೇವೆಗೆ ತನ್ನ ಸ್ನೇಹಿತರಿಂದ ಕಾರನ್ನು ಎರವಲು ಪಡೆಯುತ್ತಿದ್ದರು.
ಈ ಬಗ್ಗೆ ವರದಿಯೊಂದನ್ನು ಮಹಿಳೆಯ ಸಂಭಂದಿಯೊಬ್ಬರು ಸೋಮವಾರ ಬೆಳಿಗ್ಗೆ ಮಾಧ್ಯಮವೊಂದಕ್ಕೆ ಪೋಸ್ಟ್ ಮಾಡಿದ್ದರು. ಭಾರತೀಯರ ಈ ಸ್ವಯಂಸೇವಕ ಕೆಲಸವನ್ನು ಉತ್ತೇಜಿಸುವ ಸಲುವಾಗಿ ಸ್ಥಳೀಯ ಎನ್ಜಿಒ ಒಮಿನಿಟೇಶಿವ್ ಮುಖ್ಯಸ್ಥರಾದ ಉದ್ಯಮಿ ಸೌದ್ ಅಲ್ ಹಜೆದ್ ಅವರು ಕಾರನ್ನು ಭಾರತೀಯರಿಗೆ ನೀಡಲಾಗುವುದು ಎಂದರು. 

ಸೌದಿ ಕಲಾವಿದ ಫಯೆಝ್ ಅಲ್ ಮಲ್ಕಿ ಅವರು ಈ ಕಾರು ನೀಡುವುದಾಗಿ ಘೋಷಿಸಿದರು. ಅವರು ಭಾರತೀಯನಿಗೆ ವೈಯಕ್ತಿಕವಾಗಿ ಕಾರನ್ನು ವಿತರಿಸಲು ಮದಿನಾಗೆ ಹೋಗುತ್ತಾರೆ ಎಂದು ಹೇಳಿದರು. 

ಸೋಶಿಯಲ್ ಮೀಡಿಯಾ ಬಳಕೆದಾರರು ಭಾರತೀಯ ಸೇವಾ ಮನೋಭಾವವನ್ನು ಮತ್ತು ಕಾರು ದಾನ ನೀಡಿದನ್ನು ಹೊಗಳಿದರು ಮತ್ತು ಹಿರಿಯ ಮಹಿಳಗೆ ಭಾರತೀಯನ ನಿಸ್ವಾರ್ಥ ಸೇವೆಗೆ ಶ್ಲಾಘಿಸಿದರು. 

ಭಾರತೀಯನ ಸಹಾನುಭೂತಿಯ ಚಿಂತನಶೀಲತೆ ಮತ್ತು ಉದಾರ ಮನೋಭಾವಕ್ಕೆ ಅಲ್ ಹಜೆದ್ ಧನ್ಯವಾದ ಸಲ್ಲಿಸಿದರು.

English Summary: Indian National gifted Car for his service for a old Saudi Lady.
Tags : Indian, Saudi, service, Car gift, Free Car
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.