
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲೇ ರೂ. 50 ಹೊಸ ಕರೆನ್ಸಿಯನ್ನು ಬಿಡುಗಡೆ ಮಾಡುವುದು ಎಂದು ಶುಕ್ರವಾರ ಹೇಳಿದೆ. ಈಗ ಚಲಾವಣೆಯಲ್ಲಿರುವ ನೋಟುಗಳೂ ಚಲಾವಣೆಯಲ್ಲಿರಲಿದ್ದು, ಹೊಸ ನೋಟುಗಳೂ ಅದರ ಜೊತೆ ಜೊತೆಯಾಗಿ ಚಲಾವಣೆಯಾಗಲಿದೆ.
ಆದಾಗ್ಯೂ, ಹೊಸ ಕರೆನ್ಸಿ ಹಳೆಯ ರೂ. 50 ರ ಕರೆನ್ಸಿಗೆ ಹೋಲಿಸಿದರೆ ಭಿನ್ನವಾಗಿರಲಿದೆ.
ಹೊಸ ಕರೆನ್ಸಿ, ಪ್ಲೋರಸೆಂಟ್ ನೀಲಿ ಮತ್ತು ಗವರ್ನರ್ ಉರ್ಜಿತ್ ಆರ್. ಪಟೇಲ್ ಅವರ ಸಹಿಯನ್ನು ಹೊಂದಿರುತ್ತದೆ. ನೋಟಿನಲ್ಲಿ ಸ್ವಾಚ್ ಭಾರತ್ ಅಭಿಯಾನದ ಲಾಂಛನವನ್ನು ಅದರ ಹಿಂಬದಿಯಲ್ಲಿ ಹೊಂದಿರುತ್ತದೆ.
ಕರ್ನಾಟಕದ ಹೆಮ್ಮೆಯ ಹಂಪಿಯ ಚಿತ್ರ, ಹೊಸ ನೋಟಿನ ವಿಶೇಷ ಲಕ್ಷಣಗಳಲ್ಲಿ ಒಂದಾಗಲಿದ್ದು, ನೋಟಿನ ಹಿಂಬದಿಯಲ್ಲಿ ರಥದೊಂದಿಗೆ, ದೇಶದ ಸಾಂಸ್ಕೃತಿಕ ಪರಂಪರೆಯನ್ನು ಚಿತ್ರಿಸುತ್ತದೆ.
16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯರಿಂದ ಹಂಪಿ ರಥವನ್ನು ನಿರ್ಮಿಸಲಾಯಿತು, ಕೊನಾರ್ಕ್ ಸೂರ್ಯ ದೇವಾಲಯ ಒಡಿಶಾದ ರಥ ಅವರನ್ನು ಪ್ರಭಾವಿತಗೊಳಿಸಿತು. ವಿಜಯನಗರ ಸಾಮ್ರಾಜ್ಯದ ಕಲಾತ್ಮಕ ಪರಿಪೂರ್ಣತೆ ಮತ್ತು ಸೌಂದರ್ಯವನ್ನು ಪ್ರತಿನಿಧಿಸುವುದು ರಥದ ಉದ್ದೇಶವಾಗಿದೆ. ಒಂದು ಜಾನಪದ ಕಥೆಯ ಪ್ರಕಾರ, ಹಂಪಿ ಗ್ರಾಮದ ಸ್ಥಳೀಯರು ರಥವು ತನ್ನ ಸ್ಥಳದಿಂದ ಚಲಿಸಿದರೆ, ಪ್ರಪಂಚವು ಕೊನೆಯಾಗುತ್ತದೆ ಎಂದು ನಂಬುತ್ತಾರೆ.
ಈಗಾಗಲೇ ಹಿಂದಿ ಹೇರಿಕೆಯಿಂದ ಕೇಂದ್ರದ ಬಗ್ಗೆ ಗರಂ ಆಗಿದ್ದ ಕನ್ನಡಿಗರಿಗೆ, ನೋಟಿನಲ್ಲಿ ನಮ್ಮ ನೆಚ್ಚಿನ ಹಂಪಿಯ ಚಿತ್ರ ಹೆಮ್ಮೆಯ ವಿಷಯವಾಗಲಿದೆ.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.