ಪಾಕಿಸ್ತಾನಕ್ಕೆ ಶಾಕ್ : "ಹಫೀಜ್ ಸಯೀದ್ ಇಸ್ಲಾಂನ ನಂಬರ್ ಒನ್ ಶತ್ರು" ಎಂದ ಭಾರತದ 1000 ಇಮಾಂಗಳು

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ಮುಂಬಯಿ: 26/11 ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಭಾರತದ ಮುಸ್ಲಿಮರು ಮತ್ತು ಇಮಾಂಗಳು ತೀರ್ಪು ನೀಡಿದ್ದಾರೆ. ಹಫೀಜ್ ಸಯೀದ್ ಅವರ ಭಾರತದ ವಿರೋಧಿ ಚಟುವಟಿಕೆಗಳಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಮುಂಬೈಯಲ್ಲಿರುವ ಮದ್ರಾಸಾ ಡರುಲ್ ಉಲೂಮ್ ಅಲಿ ಹಸನ್ ಅಹ್ಲೆ ಸುನ್ನಾತ್ನಲ್ಲಿ ನಡೆದ ಸಭೆಯಲ್ಲಿ ತೀರ್ಪು ನೀಡಿದ್ದು, ಜೆ ಯು ಡಿ ಮತ್ತು ಪಾಕಿಸ್ತಾನ ಮೂಲದ ಹಲವಾರು ಭಯೋತ್ಪಾದಕ ಸಂಘಟನೆಗಳನ್ನು ಸಭೆಯಲ್ಲಿ ಖಂಡಿಸಲಾಯಿತು.

ಯು.ಎನ್ ನ ಸೆಕ್ಯೂರಿಟಿ ಕೌನ್ಸಿಲ್ನ ಕೌಂಟರ್ ಭಯೋತ್ಪಾದನಾ ಸಮಿತಿಯ ಮುಖ್ಯಸ್ಥ ಅಮರ್ ಅಬ್ದೆಲ್ಲತಿಫ್ ಅಬೌಲಟ್ಟಾ ಅವರಿಗೆ ಪತ್ರ ಬರೆದಿರುವ ಭಾರತದ ಮುಸ್ಲಿಮರು, ಪ್ರಧಾನ ಮಂತ್ರಿಯ ಕಚೇರಿ (ಪಿಎಂಒ) ಗೆ ಆ ಪತ್ರದ ಪ್ರತಿಯನ್ನು ಕಳುಸಿಸಿದ್ದಾರೆ. "ಹಫೀಜ್ ಸಯೀದ್ ನೇತೃತ್ವದ ಭಯೋತ್ಪಾದಕ ಸಂಘಟನೆಗಳು ಜಾಗತಿಕ ಶಾಂತಿಗೆ ಬೆದರಿಕೆಯಾಗಿದೆ, ಅವರು ಭಾರತವನ್ನು ನಂಬರ್ ಒನ್ ಶತ್ರು ಎನ್ನುತ್ತಾರೆ ಆದರೆ ನಿಜವಾಗಿ ಅವರು ಇಸ್ಲಾಂ ಮತ್ತು ಮಾನವೀಯತೆಯ ಶತ್ರು" ಎಂದು ಮುಂಬೈ ಮೂಲದ ಸಮಾಜಿಕ ಸಂಸ್ಥೆ ಇಸ್ಲಾಮಿಕ್ ಡಿಫೆನ್ಸ್ ಸೈಬರ್ ಸೆಲ್, ಡಾ ಅಬ್ದುರ್ ರಹಮಾನ್ ಅಂಜರಿಯಾ ಹೇಳಿದರು.