ಶೀಘ್ರದಲ್ಲಿ 100 ಕೋಟಿ ಕ್ಲಬ್ ಸೇರಲಿದೆ ಅಕ್ಷಯ್ ಕುಮಾರ್ ರ "ಟಾಯ್ಲೆಟ್" ಚಿತ್ರ

og:image

ಅಕ್ಷಯ್ ಕುಮಾರ್ ಮತ್ತು ಭೂಮಿ ಪೆಡೆನೆಕರ್ ಅವರ 'ಟಾಯ್ಲೆಟ್ ಎಕ್ ಪ್ರೇಮ್ ಕಥಾ' ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಭಿಸುತ್ತಿದೆ. ಏಪ್ರಿಲ್ 11 ರಂದು ಬಿಡುಗಡೆಯಾದ ಈ ಚಿತ್ರದ ಕಲೆಕ್ಷನ್ ಜೋರಾಗಿದೆ ಮತ್ತು ಮೊದಲ ಸೋಮವಾರ ಸುಮಾರು 12 ಕೋಟಿ ರೂಪಾಯಿ ಗಳಿಸಿದೆ. ವಾರಾಂತ್ಯದಲ್ಲಿ ಈ ಚಿತ್ರವು 21.25 ಕೋಟಿ ರೂ ಗಳಿಸಿದ್ದು, ಇಲ್ಲಿಯವರೆಗೆ ಒಟ್ಟು 62 ಕೋಟಿ ರೂಪಾಯಿ ಗಳಿಸಿದೆ. ಚಿತ್ರದ ಓಟ ಇದೇ ರೀತಿ ಮುಂದುವರೆದರೆ ಶೀಘ್ರದಲ್ಲೇ ಚಿತ್ರ ನೂರು ಕೋಟಿ ಗಳಿಸಲಿದೆ.

ಶ್ರೀ ನರಾಯಣ್ ಸಿಂಗ್ ನಿರ್ದೇಶನದ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದಲ್ಲಿ ಯಶಸ್ಸು ಪಡೆದ ಅಕ್ಷಯ್ ಕುಮಾರ್ ಮತ್ತು 'ಬೇಬಿ' ಖ್ಯಾತಿಯ ಚಲನಚಿತ್ರ ನಿರ್ಮಾಪಕ ನೀರಾಜ್ ಪಾಂಡೆ ಅವರ ಜಂಟಿ ನಿರ್ಮಾಣವಾಗಿದೆ. ಚಿತ್ರವು ಮಥುರಾ ನಂದಗಾಂವ್ ಪ್ರಾಂತ್ಯದಲ್ಲಿ ನೆಡೆಯುವ ನವಿರಾದ ಪ್ರೇಮ ಕಥೆಯನ್ನು ಹೊಂದಿದೆ ಮತ್ತು ತೆರೆದ ಶೌಚಾಲಯ ಸಮಸ್ಯೆಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ "ಸ್ವಚ್ ಭಾರತ್ ಅಭಿಯಾನ್" ಈ ಚಿತ್ರದ ಮೂಲ ಸ್ಪೂರ್ತಿಯಾಗಿದೆ. ಸರಿಯಾದ ಶೌಚಾಲಯದ ವ್ಯವಸ್ಥೆಯಿಲ್ಲದ ಮನೆಯಿಂದ ಮುನಿಸಿಕೊಂಡು ಹೊರಬರುವ ಹೊಸ ವಧು (ಭೂಮಿ ಪೆಡೆನೆಕರ್) ಮತ್ತು ಅವಳ ಪತಿ (ಅಕ್ಷಯ್ ಕುಮಾರ್)ಮನೆ ಬಿಟ್ಟು ಹೋದ ಹೆಂಡತಿಯನ್ನು ಮನೆಗೆ ಹಿಂತಿರುಗಿಸಲು ಪಡುವ ಶ್ರಮ ಈ ಚಿತ್ರದ ಕಥೆ.

English Summary: Toilet Ek Prem Katha, Akshay Kumar Movie is all set to reach 100 Crore. Movie Getting good response and already cross 60 Crores collection .
Tags : Akshay Kumar, Baby, Toilet, Narendra Modi, Movies, Hindi Movie, Bollywood
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ