
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬ್ಯುಸಿನೆಸ್ ಮಾಡುತ್ತಿದೆ ಮತ್ತು ಪ್ರತಿದಿನ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಚಿತ್ರ ಈಗಾಗಲೇ 39 ದಿನಗಳನ್ನು ಥಿಯೇಟರ್‌ಗಳಲ್ಲಿ ಪೂರೈಸಿದೆ ಆದರೆ ಇನ್ನೂ ತನ್ನ ನಾಗಲೋಟ ನಿಲ್ಲಿಸುವ ಯಾವುದೇ ಲಕ್ಷಣಗಳಿಲ್ಲ. ಇತ್ತೀಚಿನ ಸಂಗತಿಯೆಂದರೆ, ಈ ಚಿತ್ರವು ಇನ್ನೂ ಸ್ವಲ್ಪ ಸಮಯದವರೆಗೆ ಥಿಯೇಟರ್‌ಗಳಲ್ಲಿ ಓಡಬೇಕೆಂದು ತಯಾರಕರು ಒಟಿಟಿ ಪ್ಲಾಟ್‌ಫಾರ್ಮ್‌ನೊಂದಿಗೆ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸೆಪ್ಟೆಂಬರ್ 30 ರಂದು ಬಿಡುಗಡೆಯಾಯಿತು. ಅದೇ ಸಮಯದಲ್ಲಿ ಬಿಡುಗಡೆಯಾದ ಚಲನಚಿತ್ರಗಳು ಈಗ ಥಿಯೇಟರ್‌ಗಳಿಂದ ಎತ್ತಂಗಡಿಯಾಗಿವೆ, ಪೊನ್ನಿಯಿನ್ ಸೆಲ್ವನ್ 1 ಮತ್ತು ವಿಕ್ರಂ ವೇದಾ ಮುಂತಾದ ಘಟಾನುಘಟಿಗಳ ಚಿತ್ರಗಳೂ ಈಗಾಗಲೇ ತನ್ನ ಓಟ ನಿಲ್ಲಿಸಿದೆ. ಆದರೆ ಸ್ಯಾಂಡಲ್‌ವುಡ್ ಉದ್ಯಮದ ಕಾಂತಾರ ಇನ್ನೂ ಪ್ರಬಲವಾಗಿದೆ ಮತ್ತು ಟಿಕೆಟ್ ಕೌಂಟರ್ಗಳಲ್ಲಿ ಪ್ರಾಬಲ್ಯ ಮುಂದುವರೆಸಿದೆ.
ಕೆಲವು ದಿನಗಳ ಹಿಂದೆ, ಕಾಂತಾರ ಈ ತಿಂಗಳ ಆರಂಭದಲ್ಲಿ OTT ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಕೇಳಲಾಗಿತ್ತು. ಆದರೆ Tollywood.net ನಲ್ಲಿನ ವರದಿಯು ಪ್ರಕಾರ, ಈ ಚಿತ್ರವು ಈ ತಿಂಗಳ ಅಂತ್ಯದೊಳಗೆ OTT ನಲ್ಲಿ ಬರಬೇಕೆಂದು ತಯಾರಕರು ಬಯಸುತ್ತಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ತಯಾರಕರ ನಡುವಿನ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.