
ಟೋಕಿಯೋ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಭಾನುವಾರ ಪುರುಷರ ಹೈಜಂಪ್ ಟಿ 47 ಸ್ಪರ್ಧೆಯಲ್ಲಿ ಹೈ ಜಂಪರ್ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದರು. ಅವರು 2.06 ಮೀಟರ್ ನ ಜಿಗಿತವನ್ನು ಮಾಡಿದರು ಮತ್ತು ಏಷ್ಯನ್ ದಾಖಲೆಯನ್ನು ಸೃಷ್ಟಿಸಿದರು.
ಯುಎಸ್ಎಯ ರೋಡೆರಿಕ್ ಟೌನ್ಸೆಂಡ್ ಮತ್ತು ಡಲ್ಲಾಸ್ ವೈಸ್ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆದ್ದರು. ಟೌನ್ಸೆಂಡ್ 2.15 ಮೀ ಜಿಗಿತವನ್ನು ಮಾಡಿದರೆ ವೈಸ್ 2.06 ಮೀ ಜಿಗಿತವನ್ನು ದಾಖಲಿಸಿದರು.
ನಿಶಾದ್ ಮತ್ತು ವೈಸ್ ಇಬ್ಬರೂ ಒಂದೇ ಅಂಕದಲ್ಲಿ ಮುಗಿಸಿದರು, ಆದರೆ ನಿಶಾದ್ ತಮ್ಮ ಮೊದಲ ಪ್ರಯತ್ನದಲ್ಲಿ 2.02 ಅಂಕವನ್ನು ದಾಟಿದರು, ವೈಸ್ ಎರಡು ಪಡೆದರು, ಇದರ ಪರಿಣಾಮವಾಗಿ ನಿಶಾದ್ ಬೆಳ್ಳಿ ಗೆದ್ದರು. ಭಾರತದ ರಾಂಪಾಲ್ ಚಹರ್ 1.94 ಮೀಟರ್ ಜಿಗಿಯುವ ಮೂಲಕ ಐದನೇ ಸ್ಥಾನ ಪಡೆದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಮೊದಲಾಗಿ ಹಲವಾರು ಗಣ್ಯರು ನಿಶಾದ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
#Silver Medal for 🇮🇳#Athletics: Nishad Kumar wins silver medal with a best effort of 2.06m in Men's High Jump T47 event.#Tokyo2020 | #Paralympics | #Praise4Para pic.twitter.com/v5042FmCSX
— Doordarshan Sports (@ddsportschannel) August 29, 2021
Tokyo Paralympics: Nishad Kumar wins silver medal in T47 high jump event, creates Asian Record