
ಉತ್ತರ ಪ್ರದೇಶದ ಅಲಿಘರ್ ನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರ ಸಹಾಯಕ ದಾದಿಯ ಶುಶ್ರೂಷಕಿಯ ಲಸಿಕೆ ತುಂಬಿದ 29 ಸಿರಿಂಜ್‌ಗಳನ್ನು ಫಲಾನುಭವಿಗಳಿಗೆ ನೀಡದೆ ವಿಲೇವಾರಿ ಮಾಡಿದ ಆರೋಪದ ಮೇಲೆ ಭಾನುವಾರ ಪ್ರಕರಣ ದಾಖಲಿಸಲಾಗಿದೆ.
ನೇಹಾ ಖಾನ್ ಎಂಬ ಶುಶ್ರೂಷಕಿ, ಲಸಿಕೆ ಸ್ವೀಕರಿಸುವವರ ದೇಹದೊಳಗೆ ಸಿರಿಂಜಿನ ಸೂಜಿಗಳನ್ನು ಚುಚ್ಚಿ ಲಸಿಕೆ ಬಿಡುಗಡೆ ಮಾಡದೆ ಹೊರಗೆ ತೆಗೆದುಕೊಂಡು ನಂತರ ಲಸಿಕೆ ತುಂಬಿದ ಸಿರಿಂಜನ್ನು ಡಸ್ಟ್‌ಬಿನ್‌ಗೆ ಹಾಕುತ್ತಿದ್ದರು. ಜಮಾಲ್‌ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಈ ಘಟನೆ ವರದಿಯಾಗಿದೆ. ತನಿಖೆಯಲ್ಲಿ, COVID ಲಸಿಕೆಗಳಿಂದ ತುಂಬಿದ 29 ಸಿರಿಂಜುಗಳು ಡಸ್ಟ್‌ಬಿನ್‌ನಲ್ಲಿ ಕಂಡುಬಂದಿವೆ.
ದೇಶದಲ್ಲಿ ಮೋದಿ ಸರ್ಕಾರ, ನಾಗರಿಕರಿಗೆ ವಾಸಿನ್ ಪೊರೈಸಲು ದಿನ ರಾತ್ರಿ ಶ್ರಮಿಸುತ್ತಿರುವಾಗ, ಇಂತಹ ಘಟನೆ ವರದಿಯಾಗಿದ್ದು ಜನರನ್ನು ಕೆರಳಿಸಿದೆ. ಇದರಿಂದ ಕುಪಿತರಾಗಿ ಟ್ವಿಟ್ಟರ್ ಬಳಕೆದಾರರ್, ’ವಾಸಿನ್ ಜಿಹಾದ್’ ಎಂದು ಟ್ವೀಟ್ ಮಾಡಿದ್ದಾರೆ.
ಸಿಎಮ್‌ಒ ಕಚೇರಿಯ ದೂರಿನ ಮೇರೆಗೆ ಪೊಲೀಸರು ಎಎನ್‌ಎಂ ನೇಹಾ ಖಾನ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಅಫ್ರೀನ್ ಜೆಹ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
"ಸಿಎಂಒ ಕಚೇರಿಯಿಂದ 29 ಡೋಸ್ ಸಿಒವಿಐಡಿ -19 ಲಸಿಕೆಗಳು ಬಳಕೆಯಾಗದೆ ಉಳಿದಿವೆ ಎಂದು ದೂರು ಬಂದಿದೆ. ಲಸಿಕೆ ಫಲಾನುಭವಿಗಳಿಗೆ ಲಸಿಕೆ ನೀಡದೆ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಎಎನ್‌ಎಂ ನೇಹಾ ಖಾನ್ ಮತ್ತು ಅಫ್ರೀನ್ ಜೆಹ್ರಾ ವಿರುದ್ಧ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ದಾಖಲಾಗಿದೆ "ಎಂದು ಸಿಒ ಸಿವಿಲ್ ಲೈನ್ಸ್ ವಿಶಾಲ್ ಚೌಧರಿ ಎಎನ್‌ಐಗೆ ತಿಳಿಸಿದ್ದಾರೆ.
ಇನ್ನು ಕೆಲವು ವೆಬ್ ಸೈಟುಗಳು, ವಿದೇಶದಲ್ಲಿ ನಡೆದಿರುವ ಇಂತಹುದೇ ಘಟನೆಯ ವಿಡಿಯೋ ಅಪ್ಲೋಡ್ ಮಾಡಿ, ಉತ್ತರ ಪ್ರದೇಶದ ಘಟನೆಯನ್ನು ವರದಿಮಾಡಿದ್ದಾರೆ. ವಿಡಿಯೋಗೂ ಘಟನೆಗೂ ಸಂಬಂಧ ಇಲ್ಲದಿದ್ದರೂ, ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ನಿಜ ಮತ್ತು ನೇಹಾ ಖಾನ್ ಮತ್ತು ಅಫ್ರೀನ್ ಜೆಹ್ರಾ ವಿರುದ್ಧ ಕೇಸ್ ದಾಖಲಾಗಿರುವುದೂ ನಿಜವಾಗಿದೆ.